ಪತ್ರಿಕಾ ಛಾಯಾಗ್ರಾಹಕ ಎಸ್ ಆರ್ ಮಧುಸೂದನ್ ಅವರ ‘ಬಾರ್ನ್ ಔಲ್’ ಛಾಯಾಚಿತ್ರಕ್ಕೆ ‘ವೈಪಿಎಸ್ ಹಾನರರಿ ಮೆಂಷನ್’.

ಮೈಸೂರು,ಮೇ,15,2024 (www.justkannada.in): ಪತ್ರಿಕಾ ಛಾಯಾಗ್ರಾಹಕ ಹಾಗೂ ವನ್ಯಜೀವಿ ಛಾಯಾಗ್ರಾಹಕರಾದ ಎಸ್ ಆರ್ ಮಧುಸೂದನ್ ಅವರ ‘ಬಾರ್ನ್ ಔಲ್’ ಛಾಯಾಚಿತ್ರಕ್ಕೆ ವೈಪಿಎಸ್ ಹಾನರರಿ ಮೆಂಷನ್ ದೊರೆತಿದೆ.

ಬೆಂಗಳೂರಿನ ಯೂಥ್ ಫೋಟೋಗ್ರಾಫಿಕ್ ಸೊಸೈಟಿ ವತಿಯಿಂದ ನಡೆದ ವೈಪಿಎಸ್ (YPS) ನ್ಯಾಷನಲ್ ಫೋಟೋಗ್ರಾಫಿ  ಸಲೂನ್ 2024 ರಲ್ಲಿ ಎಸ್ಆರ್ ಮಧುಸೂದನ್ ರವರ ಬಾರ್ನ್ ಔಲ್ ಛಾಯಾಚಿತ್ರಕ್ಕೆ ವೈಪಿಎಸ್ ಹಾನರರಿ ಮೆಂಷನ್ ದೊರೆತಿದ್ದು, ಇನ್ನೆರಡು ಛಾಯಾಚಿತ್ರಗಳು ಸ್ವೀಕೃತಗೊಂಡಿವೆ ಈ ಸಲೂನ್ ನಲ್ಲಿ ನಾಲ್ಕು ವಿಭಾಗಗಳಿದ್ದು 206 ಮಂದಿ ಸ್ಪರ್ಧೆಗಳಿದ್ದು  2753 ಛಾಯಾಚಿತ್ರಗಳು ಸ್ಪರ್ಧೆಯಲ್ಲಿ ಇದ್ದವು.

ಜನವರಿ 2024 ರಿಂದ  ಇತ್ತೀಚಿಗೆ ನಡೆದ ಹಲವಾರು ಇಂಟರ್ನಾಷನಲ್ ಸಲೂನ್ ಫೋಟೋಗ್ರಾಫಿ ಸ್ಪರ್ಧೆಗಳಲ್ಲಿ ಫೆಡರೇಶನ್ ಆಫ್ ಇಂಡಿಯನ್ ಫೋಟೋಗ್ರಾಫಿಯ ಚಿನ್ನದ ಪದಕಗಳು ಹಾಗೂ 20ಕ್ಕೂ ಹೆಚ್ಚು ಹಾನರರಿ ಪದಕಗಳು ದೊರೆತಿವೆ. ಎಸ್ ಆರ್ ಮಧುಸೂದನ್ ಅವರಿಗೆ  ಫೋಟೋಗ್ರಾಫಿ ಸೊಸೈಟಿ ಆಫ್ ಇಂಡಿಯಾದ 2023 ನೇ ಸಾಲಿನ ಟಾಪ್ 100 ಇಂಡಿಯನ್ ಎಕ್ಸಿಬಿಟರ್ ರಲ್ಲಿ 74ನೇ ಸ್ಥಾನ ಗಳಿಸಿದ್ದಾರೆ.  ಹಾಗೂ ಟಾಪ್  ರಾಂಕಿಂಗ್ (RANKING)  20 ಛಾಯಾ ಚಿತ್ರಗಳಲ್ಲಿ  ಜಿಂಕೆಗಳ ಮಿಲನ ಚಿತ್ರ  17 ನೇ ( RANK )ರಾಂಕಿಂಗ್ ಗಳಿಸಿದ್ದಾರೆ.

Key words: YPS, Honorary, Mention, SR Madhusudan