ಮೈಸೂರು ಜಿಲ್ಲೆಯಲ್ಲಿ ಯುವಕರ ಜೋಡಿ ಕೊಲೆ: ಪ್ಲಾಸ್ಟಿಕ್ ಚೀಲದಲ್ಲಿ ಶವಗಳು ಪತ್ತೆ.

ಮೈಸೂರು,ಡಿಸೆಂಬರ್, 21,2023(www.justkannada.in):  ಮೈಸೂರು ಜಿಲ್ಲೆ ಕೆ.ಆರ್.ನಗರದ ಬಳಿ ಇಬ್ಬರು ಯುವಕರನ್ನ ಕೊಲೆ ಮಾಡಲಾಗಿದೆ.

ಸಾಗರಕಟ್ಟೆ ಹಿನ್ನೀರಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿದ ಪರಿಸ್ಥಿತಿಯಲ್ಲಿ ಇಬ್ಬರು ಯವಕರ ಮೃತದೇಹ ಪತ್ತೆಯಾಗಿದೆ. ಸುಮಾರು 25 ರಿಂದ 30 ವರ್ಷ ವಯಸ್ಸಿನ ಯುವಕರನ್ನ ಕಿಡಿಗೇಡಿಗಳು ಕೊಲೆಗೈದಿದ್ದಾರೆ ಎನ್ನಲಾಗಿದೆ.

ಯುವಕರನ್ನ ಕೊಂದು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಕೆರೆಯಲ್ಲಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಓರ್ವನ ಕೈ ಮೇಲೆ ನಾಗರಾಜನ್ VR POSTER 4B LEGEND ಎಂದು ಅಚ್ಚೆ ಇದೆ. ಇನ್ನು ಸ್ಥಳಕ್ಕೆ ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್ ಹಾಗೂ ಅಡಿಷನಲ್ ಎಸ್ಪಿ ನಂದಿನಿ ಮತ್ತು ಡಿವೈಎಸ್ಪಿ ಕರೀಂರಾವತರ್ ಭೇಟಿ ನೀಡಿ ಪರಿಶೀಲನೆ  ನಡೆಸಿದ್ದಾರೆ. ಈ ಕುರಿತು ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: youths- killed – Mysore -district