ವರುಣಾ ಕೆರೆಗೆ ಹಾರಿ ಯುವಕ ಆತ್ಮಹತ್ಯೆ

ಮೈಸೂರು, ಮಾರ್ಚ್ 11, 2020 (www.juskannada.in): ವರುಣಾ ಕೆರೆಗೆ ಹಾರಿ ಯುವಕ ಆತ್ಮಹತ್ಯೆ ಮಾಡಿದ್ದಾರೆ.

ಮೈಸೂರು ತಾಲೂಕು ಭುಗತಹಳ್ಳಿ ಗ್ರಾಮದ ಬಸವಣ್ಣ (25) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.

ಮೈಸೂರು-ತಿ.ನರಸೀಪುರ ರಸ್ತೆಯಲ್ಲಿರೋ ವರುಣಾ ಕೆರೆಗೆ ನಿನ್ನೆ ಸಂಜೆ ಹಾರಿದ್ದ.

ಇಂದು ಬೆಳಗ್ಗೆ ಕೆರೆಯಲ್ಲಿ ಈಜುಗಾರರಿಂದ ಶವ ಪತ್ತೆ ಮಾಡಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.