ಧಾರವಾಡ,ಡಿಸೆಂಬರ್,17,2025 (www.justkannada.in): ಸ್ಪರ್ಧಾತ್ಮಕ ಪರೀಕ್ಷೆ ಸಿದ್ದತೆಗಾಗಿ ಬಂದಿದ್ದ ಯುವತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ತಪೋವನದ ಕ್ಯಾರಕೊಪ್ಪ ರೈಲ್ವೆಗೇಟ್ ಬಳಿ ಈ ಘಟನೆ ನಡೆದಿದೆ. ಬಳ್ಳಾರಿ ಮೂಲದ ಪಲ್ಲವಿ (24) ಮೃತಪಟ್ಟವರು. ಪಲ್ಲವಿ ಸ್ಪರ್ಧಾತ್ಮಕ ಪರೀಗಳಿಗೆಕ್ಷೆ ಸಿದ್ದತೆ ನಡೆಸುವ ಸಲುವಾಗಿ ಧಾರವಾಡಕ್ಕೆ ಬಂದಿದ್ದರು. ಈ ಮಧ್ಯೆ ಇದೀಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಧಾರವಾಡ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Key words: preparing, competitive exams, Young woman, suicide







