ಪ್ರೇಮ ವೈಪಲ್ಯ: ಯುವತಿ ನೇಣಿಗೆ ಶರಣು

ಬೆಂಗಳೂರು,ಸೆಪ್ಟಂಬರ್,9,2025 (www.justkannada.in): ತಾನು ಪ್ರೀತಿಸಿದ ಹುಡುಗ ಮದುವೆಯಾಗಲು ಹಿಂದೇಟು ಹಾಕುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದು ಯುವತಿಯೋರ್ವಳು  ನೇಣು ಬಿಗಿದುಕೊಂಡು  ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ರಾಜಾಜಿನಗರದ ಗಾಯತ್ರಿ ನಗರದಲ್ಲಿ ಈ ಘಟನೆ ನಡೆದಿದೆ. ಲತಾ (25) ಆತ್ಮಹತ್ಯೆ ಮಾಡಿಕೊಂಡ ಯುವತಿ.  ರಂಜಿತ್  ಎಂಬ ಯುವಕ ಹಾಗು ಲತಾ ಪರಸ್ಪರ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಮಧ್ಯೆ ಈ ಇಬ್ಬರ ಪ್ರೀತಿಗೆ ಎರಡು ಕುಟುಂಬದವರೂ ಒಪ್ಪಿ ಮದುವೆಗೆ ಮುಂದಾಗಿದ್ದರು.

ಮೃತ ಲತಾ ಹಾಗೂ ರಂಜಿತ್ ಇಬ್ಬರು ಮಂಡ್ಯ ಮೂಲದವರು . ಖಾಸಗಿ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದ ಮೃತ ಲತಾ ತನ್ನ ಪ್ರಿಯಕರ ರಂಜಿತ್ ಗೆ ಮದುವೆ ವಿಚಾರವನ್ನ ಪ್ರಸ್ತಾಪ ಮಾಡುತ್ತಿದ್ದಳು. ಆದರೆ ರಂಜಿತ್  ಪದೇ ಪದೇ  ಮದುವೆ ವಿಚಾರವನ್ನ ಮುಂದೂಡುತ್ತಿದ್ದ. ಇದಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯ ಹಲವು ಬಾರಿ ಗಲಾಟೆ ಆಗಿತ್ತು.

ನಿನ್ನೆಯೂ ಕೂಡ ಇದೆ ವಿಚಾರವಾಗಿ ಇಬ್ಬರ ಮಧ್ಯ ಗಲಾಟೆ ಆಗಿದ್ದು, ಮನನೊಂದ ಯುವತಿ ಲತಾ ಇಂದು ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನಾ ಸ್ಥಳಕ್ಕೆ ಸುಬ್ರಮಣ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಾಗಿದೆ.

Key words: Love failure,  Young woman, commits suicide