ಯುವ ಸಮುದಾಯ ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಿ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸಲಹೆ

ಮೈಸೂರು,ಏಪ್ರಿಲ್ 6,2021(www.justkannada.in): ಭವಿಷ್ಯದ ಉತ್ತಮ ಸಮಾಜದ ನಿರ್ಮಾತೃಗಳಾದ ಯುವಸಮುದಾಯವು ಉತ್ತಮ ವಿಚಾರಗಳನ್ನು ತಿಳಿದುಕೊಳ್ಳುವ ಮೂಲಕ ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

Illegally,Sand,carrying,Truck,Seized,arrest,driverಮೈಸೂರು ವಿಶ್ವವಿದ್ಯಾನಿಲಯ ಡಾ.ಬಾಬೂ ಜಗಜೀವನರಾಮ್ ಅಧ್ಯಯನ, ಸಂಶೋಧನ ಮತ್ತು ವಿಸ್ತರಣ ಕೇಂದ್ರ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ವಿಶೇಷ ಘಟಕದ ವತಿಯಿಂದ ಡಾ.ಬಾಬೂ ಜಗಜೀವನರಾಮ್ ಅವರ 114 ನೇ ವರ್ಷದ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗರದ ಸಮಾರೋಪ ಸಮಾರಂಭದಲ್ಲಿ ಕಾರ್ಯಾಗರದ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದರು.

ಜ್ಞಾನವನ್ನು ಪ್ರಸಾರ ಮಾಡುವಂತಹ ಕಾರ್ಯಾಗಾರಗಳನ್ನು ಹೆಚ್ಚಾಗಿ ಆಯೋಜಿಸುವ ಮೂಲಕ ಸಮಾಜವನ್ನು ಮುನ್ನೆಡೆಸುವಂತಹ ಸಮರ್ಥ ನಾಯಕರನ್ನು ಸೃಷ್ಟಿಸುವುದು ಅಗತ್ಯ. ವಿಶೇಷ ಕೊಡುಗೆಯನ್ನು ನೀಡುವ ಮೂಲಕ ಇತಿಹಾಸದ ಪುಟದಲ್ಲಿ ದಾಖಲಾಗಿರುವ ಮಹಾನೀಯರ ಕುರಿತಂತೆ ಮರೆತ ವಿಷಯಗಳನ್ನು ಈ ರೀತಿಯ ಕಾರ್ಯಕ್ರಮಗಳ ಮೂಲಕ ಮತ್ತೆ ನೆನಪಿಸಿಕೊಳ್ಳುವ ಕಾರ್ಯಮಾಡಬೇಕಿದೆ ಎಂದು ಹೇಳಿದರು.

ಕಾರ್ಯಗಾರದಲ್ಲಿ ಸಂಶೋಧಕರಿಗೆ ಉತ್ತಮ ಮಾಹಿತಿಯ ಜೊತೆಗೆ ಸಂಶೋಧನೆಯ ನೆಲೆಯನ್ನು ಹೇಗೆ ವಸ್ತುನಿಷ್ಠವಾಗಿ ನಡೆಸಬೇಕು ಎನ್ನುವಂತಹ ಮಹತ್ವದ ವಿಚಾರಗಳ ಕುರಿತು ತಿಳಿಸಿಕೊಡುವ ಕಾರ್ಯವಾಗಿದೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.

ಸಮಾಜಸುಧಾರಕರನ್ನು ಸಮಾಜ ವಿಜ್ಞಾನಿಗಳು ಎಂದು ಕರೆದರೆ ತಪ್ಪಾಗಲಾರದು

ಡಾ.ಬಾಬೂ ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ನಟರಾಜು ಮಾತನಾಡಿ, ಸಮಾಜಸುಧಾರಕರನ್ನು ಸಮಾಜ ವಿಜ್ಞಾನಿಗಳು ಎಂದು ಕರೆದರೆ ತಪ್ಪಾಗಲಾರದು. ಸಮಾಜವನ್ನು ಸುಧೀರ್ಘವಾಗಿ ಅಧ್ಯಯನ ಮಾಡಿ, ಅಲ್ಲಿನ ನ್ಯೂನ್ಯತೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹೊಸ ಚಿಂತನೆಗಳ ಬಿತ್ತುವ ಕಾರ್ಯವನ್ನು ಸಮಾಜ ವಿಜ್ಞಾನಿಗಳು ಮಾಡಿದ್ದಾರೆ ಎಂದರು.

ಬಾಬೂ ಜಗಜೀವನ್ ರಾಮ್ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳ ಕಾರ್ಯರೂಪಕ್ಕೆ ತರುವುದಕ್ಕೆ ಶ್ರಮಿಸಿದರು. ಸಂವಿಧಾನದಲ್ಲಿ ಸೂಚಿಸಿರುವ ಹಕ್ಕುಗಳು, ಅವಕಾಶಗಳನ್ನು ಅವಕಾಶ ವಂಚಿತರಿಗೆ ತಲುಪಿಸುವ ಕಾರ್ಯ ಮಾಡಿದ್ದಾರೆ ಎಂದು ಸ್ಮರಿಸಿದರು.

ಬಹುತೇಕರಿಗೆ ಸಮಾಜ ಸುಧಾರಕರ ಕೊಡುಗೆಗಳ ಬಗ್ಗೆ ಅರಿವಿಲ್ಲ

ಸಮಾಜ ಸುಧಾರಕರ ಚಿಂತನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯವಾಗಬೇಕಿದೆ. ಕೆಲವರಿಗೆ ಸಮಾಜ ಸುಧಾರಕರ ಹೆಸರು ಗೊತ್ತಿಲ್ಲವಾದರೆ, ಬಹುತೇಕರಿಗೆ ಅವರು ನೀಡಿರುವ ಕೊಡುಗೆಗಳ ಬಗ್ಗೆ ಅರಿವಿಲ್ಲ ಎಂದು ಬೇಸರವ್ಯಕ್ತಪಡಿಸಿದರು.

Young-people-Rational-Consolidate-Thoughts-Chancellor-Prof.G.Hemant Kumar- Advice

ಕಾರ್ಯಕ್ರಮದಲಿ ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಎಸ್.ಡಿ.ದೊಡ್ಡಾಚಾರಿ, ಡಾ.ಬಾಬೂ ಜಗಜೀವನರಾಮ್ ಅಧ್ಯಯನ ಕೇಂದ್ರ ನಿರ್ದೇಶಕ ಪ್ರೊ.ಕೆ.ಸದಾಶಿವ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ವಿಶೇಷ ಘಟಕ ಉಪಕುಲಸಚಿವ ಡಾ.ಎಸ್.ಮಹದೇವ ಮೂರ್ತಿ, ಪ್ರೊ.ಸಿ.ರಾಮಸ್ವಾಮಿ ಇತರರು ಉಪಸ್ಥಿತರಿದ್ದರು.

ENGLISH SUMMARY….

Prof. G. Hemanth Kumar inaugurates valedictory function of two-day workshop
Mysuru, Apr. 6, 2021 (www.justkannada.in): The Dr. Babu Jagjivanram Study, Research and Extension Centre, in association with the SC, ST Special unit had organized a two-day workshop on the topic, “Babu Jagjivanram on Research Base,” and “Language and Social Sciences Research,” on the occasion of the Dr. Babu Jagjivanram’s 114th Jayanti Mahotsav. Prof. G. Hemanth Kumar, Vice-Chancellor, University of Mysore inaugurated the valedictory function of the two-day workshop today and addressed the gathering.Young-people-Rational-Consolidate-Thoughts-Chancellor-Prof.G.Hemant Kumar- Advice
Dr. H. Nataraju, Managing Director, Dr. Babu Jagjivanram Leather Industries Development Corporation, S.D. Doddachari, University of Mysore Syndicate Member, Prof. K. Sadashiva, Director, Dr. Babu Jagjivanram Research Centre, UoM, Dr. S. Mahadev, Deputy Registrar, SC, ST Special Unit, Prof. C. Ramaswamy, and others were present on the occasion.
Keywords: Dr. Babu Jagjivanram Jayanti/ two-day workshop/ University of Mysore/ Prof. G. Hemanth Kumar

key words : Young-people-Rational-Consolidate-Thoughts-Chancellor-Prof.G.Hemant Kumar- Advice