“ಯುವಜನರ ಎದುರು ಅನೇಕ ಸವಾಲುಗಳು” : ಕುಲಪತಿ ಡಾ.ನಾಗೇಶ್ ವಿ.ಬೆಟ್ಟಕೋಟೆ

ಮೈಸೂರು,ಮಾರ್ಚ್,24,2021(www.justkannada.in) : ಭಾರತವು ಮುಂದುವರಿದ ದೇಶಗಳ ದಾಸ್ಯಕ್ಕೆ ಒಳಗಾಗುತ್ತಿದ್ದು, ಯುವಜನರ ಎದುರು ಅನೇಕ ಸವಾಲುಗಳಿವೆ ಎಂದು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಕುಲಪತಿ ಡಾ.ನಾಗೇಶ್ ವಿ.ಬೆಟ್ಟಕೋಟೆ ಬೇಸರವ್ಯಕ್ತಪಡಿಸಿದರು.jkಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸುಜನ ಸಮಾಜ, ಮೈಸೂರು ವಿಶ್ವವಿದ್ಯಾನಿಲಯ, ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಸಂಯುಕ್ರಾಶ್ರಯದಲ್ಲಿ ಆಯೋಜಿಸಿದ್ದ “ಪ್ರತಿಭೋತ್ಸವ-2019 ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯಗಳ 2018-19ಸಾಲಿನ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸಮಾಜ ಸ್ವಾರ್ಥ ಸಮಾಜವಾಗಿದೆ. ಸರ್ಕಾರದ ಬಹುತೇಕ ಇಲಾಖೆಗಳು ಖಾಸಗೀಕರಣವಾಗುತ್ತಿದೆ. ಅನುಕೂಲ ದೊರಕಿದರೂ, ನಾವು ಯಾರ ಅಧೀನಕ್ಕೆ ಒಳಗಾಗುತ್ತಿದ್ದೇವೆ ಎಂಬುದರ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದರು.ವಿದ್ಯಾವಂತರಿಗೆ ಉದ್ಯೋಗವಿಲ್ಲದಂತ್ತಾಗಿದೆ. ಹೀಗಾಗಿಯು, ಎಲ್ಲರೂ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಾದರೂ ವೃತ್ತಿಪರ ಶಿಕ್ಷಣವಿಲ್ಲ. ಇದನ್ನು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಯೋಗಮಾಡಲಿದ್ದು,  ಅದರ ಫಲಿತಾಂಶವು 10,15 ವರ್ಷಗಳ ನಂತರ ದೊರೆಯಲಿದೆ ಎಂದರು.

ಬಡತನ, ನಿರುದ್ಯೋಗ ಸೇರಿದಂತೆ ಮೌಲ್ಯಗಳು ಮರೆಯಾಗುತ್ತಿದ್ದು, ಗಂಭೀರ ಸಮಸ್ಯೆಗಳು ಇಂದಿನ ಯುವಜನಾಂಗಕ್ಕೆ ಎದುರಾಗಿವೆ. ಹೀಗಾಗಿ, ಬಹಳ ಆಲೋಚಿಸಿ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿನ 2018-19ನೇ ಸಾಲಿನ ಶೈಕ್ಷಣಿಕ ಸಾಲಿನ ಸಾಧಕರಾದ ಸೌಮ್ಯ(ಬಿಎ), ಬಿ.ಟಿ.ವಾಣಿ(ಬಿ.ಕಾಂ), ಉಮ್ಮೆ ರೂಮಾನ(ಬಿ.ಸಿ.ಎ), ಪಿ.ಮಂಜು(ಬಿ.ಪಿ.ಎ), ಸಿ.ಜೆ.ಪೂಜೆ(ಬಿ.ಟಿ.ಎಚ್), ಜೆ.ಕೆ.ಪಿ.ಜಯಶ್ರೀ(ಬಿ.ಎ(ಎಸ್ಪಿಎಲ್), ಮೃದುಲಗೋರೆ(ಬಿ.ಎಸ್ ಸಿ), ನಿಖಾತ್ ಫಾತಿಮಾ(ಬಿ.ಬಿ.ಎ) ಅವರನ್ನು ಹಾಗೂ ಕರ್ನಾಟಕ ರಾಜ್ಯ ಡಾ,ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯದ 2018-19ನೇ ಸಾಲಿನ ಸಾಧಕರಾದ ಆರ್.ಸಿ.ಲಕ್ಷ್ಮೀ(ಕರ್ನಾಟಕ ಸಂಗೀತ ಗಾಯನ), ಡಿ.ಆರ್.ದಾಕ್ಷಾಯಿಣಿ(ಹಿಂದೂಸ್ತಾನಿ ಸಂಗೀತ), ಎಚ್.ಎಸ್.ಸ್ವಪ್ನ(ನಾಟಕ) ಇವರುಗಳನ್ನು ಸನ್ಮಾನಿಸಲಾಯಿತು.Young-people-Opposite-Many-Challenges-Chancellor-Dr.Nagesh V.Bettakote

ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಎಂಜಿನಿಯರಿಂಗ್ ಡಾ.ಸಿ.ಎನ್.ರವಿಕುಮಾರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಚಂದ್ರಶೇಖರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಇತರರು ಉಪಸ್ಥಿತರಿದ್ದರು.

key words : Young-people-Opposite-Many-Challenges-Chancellor-Dr.Nagesh V.Bettakote