ಜೀವನದಲ್ಲಿ ಜಿಗುಪ್ಸೆಗೊಂಡು ಚಾಮುಂಡಿ ಬೆಟ್ಟದಲ್ಲಿ ನೇಣಿಗೆ ಶರಣಾದ ಯುವಕ…

ಮೈಸೂರು,ಜು,11,2019(www.justkannada.in): ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೋರ್ವ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ  ನಡೆದಿದೆ.

ಚಾಮುಂಡಿ ಬೆಟ್ಟದ ರಸ್ತೆಯ ಪಕ್ಕದ ಪೊದೆಯಲ್ಲಿ ಯುವಕ ನೇಣಿಗೆ ಶರಣಾಗಿದ್ದಾನೆ. 17 ವರ್ಷದ ಮಣಿಕಂಠ ನಾಯಕ ಸಾವಿಗೆ ಶರಣಾದ ಯುವಕ. ನಂಜನಗೂಡು ತಾಲ್ಲೂಕಿನ ಅಲ್ಲರೇ ಗ್ರಾಮದ ನಿವಾಸಿಯಾಗಿರುವ  ಮಣಿಕಂಠ ಕಳೆದ ಎರಡು ವರ್ಷದಿಂದ ಮೈಸೂರಿನ ಕಲ್ಯಾಣ ಮಂಟಪಗಳಲ್ಲಿ ಅಡುಗೆ ಬಡಿಸುವ ಕೆಲಸ ಮಾಡುತ್ತಿದ್ದ.

ಈ ನಡುವೆ ನಿನ್ನೆ ಬೆಳಿಗ್ಗೆ 11 ಗಂಟೆಯ ನಂತರ ಚಾಮುಂಡಿ ಬೆಟ್ಟದ ಬಳಿ ಮಣಿಕಂಠ ನೇಣಿಗೆ ಶರಣಾಗಿದ್ದು, ನೇಣುಬಿಗಿದ ಸ್ಥಿತಿಯಲ್ಲಿದ್ದ ಮಣಿಕಂಠನ ಶವ ನೋಡಿದ ಸ್ಥಳೀಯರು ಈ ವಿಚಾರವನ್ನ  ಕೆ.ಆರ್. ಪೋಲಿಸರಿಗೆ ತಿಳಸಿದ್ದಾರೆ. ತಕ್ಷಣ ಕೆ.ಆರ್. ಪೋಲಿಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಂದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಪೊಲೀಸರು ಕುಟುಂಬಸ್ಥರಿಗೆ ಮೃತ ದೇಹ  ನೀಡಲಿದ್ದಾರೆ.

Key words: young man -surrendered –succide-Chamundi Hill