Thursday, July 30, 2026

BDA Apartments

Home Crime ಮದುವೆಯಾಗಲು ಹುಡುಗಿ ಸಿಗದ ಹಿನ್ನೆಲೆ: ಯುವಕ ಆತ್ಮಹತ್ಯೆ

ಮದುವೆಯಾಗಲು ಹುಡುಗಿ ಸಿಗದ ಹಿನ್ನೆಲೆ: ಯುವಕ ಆತ್ಮಹತ್ಯೆ

ಹಾಸನ ಏಪ್ರಿಲ್,29,2026 (www.justkannada.in): ಮದುವೆಯಾಗಲು ಹುಡುಗಿ ಸಿಗದ ಹಿನ್ನೆಲೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ವಿಷ್ಣುಸಮುದ್ರ ಗ್ರಾಮದಲ್ಲಿ ನಡೆದಿದೆ.

ವಿನಯ್(35) ಆತ್ಮಹತ್ಯೆಗೆ ಶರಣಾದ ಯುವಕ. ಚಿಕ್ಕಮಗಳೂರು ಜಿಲ್ಲೆ ಆಲ್ದೂರು ತಾಲ್ಲೂಕಿನ ಗುಡ್ದೂರು ಗ್ರಾಮದ ನಿವಾಸಿಯಾಗಿರುವ ವಿನಯ್ ಕಳೆದ 10 ವರ್ಷಗಳಿಂದ ಬೇಲೂರಿನಲ್ಲಿ ವಾಸವಿದ್ದನು. ಈ ಮಧ್ಯೆ ಐದಾರು ವರ್ಷಗಳಿಂದ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದನು.

ಆದರೆ ಹುಡುಗಿ ಸಿಗದ ಹಿನ್ನೆಲೆ ಮನನೊಂದಿದ್ದ ವಿನಯ್ ಕಳೆದ ಒಂದು ವಾರದಿಂದ ಕೆಲಸಕ್ಕೂ ಹೋಗದೆ ಮನೆಯಲ್ಲಿದ್ದನು ಎನ್ನಲಾಗಿದೆ. ಈ ಮಧ್ಯೆ  ವಿಷ್ಣುಸಮುದ್ರದಲ್ಲಿ ಕಲ್ಯಾಣಿಗೆ ಜಿಗಿದು ವಿನಯ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Key words: Young man, commits, suicide, marry