ಹುಡುಗಿ ವಿಚಾರಕ್ಕೆ ಕಿರಿಕ್: ಯುವಕನ ಬಟ್ಟೆ ಬಿಚ್ಚಿ ಮಾರಣಾಂತಿಕ ಹಲ್ಲೆ

ಬೆಂಗಳೂರು ಗ್ರಾಮಾಂತರ, ಜುಲೈ,7,2025 (www.justkannada.in):  ಹುಡುಗಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆಂದು ಆರೋಪಿಸಿ  ಕಿಡಿಗೇಡಿಗಳು ಯುವಕನ ಬಟ್ಟೆ ಬಿಚ್ಚಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದೆ.

ಕುಶಾಲ್ ಹಲ್ಲೆಗೊಳಗಾದ ಯುವಕ. ಪ್ರಕರಣ ಸಂಬಂಧ ಸೋಲದೇವನಹಳ್ಳಿ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಹೇಮಂತ್, ಯಶವಂತ್​, ಶಿವಶಂಕರ್, ಶಶಾಂಕ್ ಗೌಡ ಬಂಧಿತರು.

ಕುಶಾಲ್ ಮತ್ತು ಯುವತಿ  ನಡುವೆ ಎರಡು ವರ್ಷದ ಪ್ರೀತಿ ಇತ್ತು. ಕೆಲವು ತಿಂಗಳ ಹಿಂದೆ ಇವರಿಬ್ಬರ ಪ್ರೀತಿಯಲ್ಲಿ ಬಿರುಕು ಮೂಡಿ ಈ ವೇಳೆ ಯುವತಿಗೆ ಬೇರೊಬ್ಬ ಹುಡುಗನ ಪರಿಚಯವಾಗಿದೆ. ಇದನ್ನು ಸಹಿಸಲಾಗದೆ ಕುಶಾಲ್, ಯುವತಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಆರೋಪವಿದೆ.

ಈ ಹಿನ್ನೆಲೆಯಲ್ಲಿ  ಯುವತಿಯ ಗೆಳೆಯ ಮತ್ತು ಆತನ ಸ್ನೇಹಿತರು ಸೇರಿಕೊಂಡು ಕುಶಾಲ್ ​ನನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಕುಶಾಲ್ ​ನ ಬಟ್ಟೆ ಬಿಚ್ಚಿ ಮರ್ಮಾಂಗ ತುಳಿದು ವಿಕೃತಿ ಮೆರೆದಿದ್ದಾರೆ ಎನ್ನಲಾಗಿದೆ.

ಆರೋಪಿಗಳು ಹಲ್ಲೆ ಮಾಡಿರುವುದನ್ನ ವಿಡಿಯೋ ಮಾಡಿಕೊಂಡಿದ್ದು, ವಿಡಿಯೋದಲ್ಲಿ ಆರೋಪಿಗಳು, ರೇಣುಕಾಸ್ವಾಮಿ ಕೊಲೆ ಕೇಸ್​ ನಂತೆ ಇದೂ ಆಗುತ್ತೆ. ಎ1 ಹೇಮಂತ ಎ2 ನಾನು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.  ಈ ವಿಡಿಯೋ ವೈರಲ್ ಆಗಿದೆ. ಈ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.vtu

Key words:  young man, Fatal attack, dispute, girl, Bangalore