ಪಾಗಲ್ ಪ್ರೇಮಿ ಹುಸಿ ಕರೆಗೆ ಯುವತಿ ಆತ್ಮಹತ್ಯೆ.

ಬೆಂಗಳೂರು,ಡಿಸೆಂಬರ್,16,2021(www.justkannada.in): ಪಾಗಲ್​ ಪ್ರೇಮಿಯೊಬ್ಬನ ಹುಸಿ ಫೋನ್ ಕರೆಗೆ ಯುವತಿ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರದ ದೊಡ್ಡಬಿದರಕಲ್ಲು ಬಳಿ ಈ ಘಟನೆ ನಡೆದಿದೆ . ಸಾಕ್ಷಿ (24) ಆತ್ಮಹತ್ಯೆಗೆ ಶರಣಾದ ಯುವತಿ. ಅರುಣ್​ ಎಂಬಾತ ಸಾಕ್ಷಿಯನ್ನು ಪ್ರೀತಿಸು , ಮದುವೆಯಾಗು ಎಂದು ಪೀಡಿಸುತ್ತಿದ್ದ . ಆಕೆ ಅದಕ್ಕೆ ಒಪ್ಪದ ಕಾರಣ ಅತನ ಗೆಳೆಯ ಗೋಪಾಲ್ ಬಳಿ ಬೆದರಿಕೆ ಕರೆ ಮಾಡಿಸಿದ್ದಾನೆ . ಇದರಿಂದ ಹೆದರಿದ ಯುವತಿ ದೊಡ್ಡಬಿದರಕಲ್ಲು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ .

ಅರುಣ್  ತನ್ನ ಗೆಳೆಯ ಗೋಪಾಲ್ ಬಳಿ ಪೊಲೀಸ್​ರಂತೆ ನಟಿಸಿ ಸಾಕ್ಷಿಯ ಮಾವ ಪ್ರಜ್ವಲ್‌ ಎಂಬುವವರಿಗೆ ಫೋನ್​ ಮಾಡಿ ಸಾಕ್ಷಿಯ ಬಳಿ ಮಾತನಾಡಿದ್ದಾನೆ . ನಕಲಿ ಪೊಲೀಸ್​ ಗೋಪಾಲ್​ ಬಸವೇಶ್ವರ ನಗರ ಪೊಲೀಸ್ ಠಾಣೆಯಿಂದ ಫೋನ್​ ಮಾಡುತ್ತಿರುವುದಾಗಿ ಹೇಳಿದ್ದಾನೆ . ಬಳಿಕ ಮುಂದುವರೆದು ನಾನು ಬಸವೇಶ್ವರ್ ನಗರ ಪೊಲೀಸ್ ಠಾಣೆಯಿಂದ ಕರೆ ಮಾಡುತ್ತಿದ್ದೇನೆ. ಅರುಣ್ ಎಂಬ ಯುವಕ  ಸಾಕ್ಷಿ ಹೆಸರು ಹೇಳಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಬಗ್ಗೆ ದೂರು ನೀಡಿದ್ದಾರೆ ಎಂದಿದ್ದಾನೆ.

ಇದರಿಂದ ಭಯಗೊಂಡ ಯುವತಿ ಸಾಕ್ಷಿ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದ್ದು . ಈ ಬಗ್ಗೆ ಸಾಕ್ಷಿ ಪೋಷಕರು ದೂರು ನೀಡಿದ್ದು , ಪೀಣ್ಯ ಪೊಲೀಸರು ಆರೋಪಿಗಳಾದ ಪ್ರೇಮಿ ಅರುಣ್ ಹಾಗೂ ನಕಲಿ ಪೊಲೀಸ್ ಗೋಪಾಲ್‌ ನನ್ನು ಬಂಧಿಸಿದ್ದಾರೆ.

Key words: Young –girl- commits -suicide –call- pagal lover-bangalore