ಬೆಳಗಾವಿ,ಡಿಸೆಂಬರ್,17,2025 (www.justkannada.in): ಗ್ರಾಮೀಣ ಭಾಗದಲ್ಲಿ ಕೃಷಿ ಮಾಡುವ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ. ಈ ಯುವಕರಿಗೆ ಯೋಜನೆಯನ್ನು ಘೋಷಣೆ ಮಾಡಿ ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಆಗ್ರಹಿಸಿದರು.
ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ ಎಂಎಲ್ ಸಿ ಪುಟ್ಟಣ್ಣ, ಗ್ರಾಮೀಣ ಭಾಗದಲ್ಲಿ ಕೃಷಿ ಮಾಡುವ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಹಾಗಾಗಿ ಸರ್ಕಾರ ಇವರಿಗೆ ಒಂದು ಯೋಜನೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಹೆಣ್ಣು ಮಕ್ಕಳು ಸಿಗದೇ ತಾಲೂಕಿಗೆಂದು ಮಠ ಕಟ್ಟಿ ಕೊಡಿ ಅಂತ ಅರ್ಜಿ ಹಾಕುತ್ತಿದ್ದಾರೆ. ಮಠ ಕಟ್ಟಿ ಕೊಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದೆ. ಹೀಗಾಗಿ ಇಂತಹ ಯುವಕರಿಗೆ ಯೋಜನೆ ಜಾರಿ ಮಾಡಿ ಎಂದರು.
Key words: Announce, scheme, young farmers, MLC, Puttanna, session







