ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ನೋಡನೋಡುತ್ತಲೇ ಕಟ್ಟಡದಿಂದ ಕೆಳಗೆ ಹಾರಿದ ಯುವಕ-ಯುವತಿ

ಬೆಂಗಳೂರು, ಮೇ 21, 2022 (www.justkannada.in): ಯುವಕ-ಯುವತಿ ಇಬ್ಬರೂ ಶಾಂಪಿಂಗ್​ ಕಾಂಪ್ಲೆಕ್ಸ್​ನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ವೀಕೆಂಡ್​ ಶಾಪಿಂಗ್​ ಮಾಡಲೆಂದು ಬ್ರಿಗೇಡ್​ ರಸ್ತೆಗೆ ಬಂದಿದ್ದ ಆತ್ಮಹತ್ಯೆಗೆ ಯತ್ನಿಸಿದ್ದಾರೆ. , ಯುವತಿ-ಯುವಕನ ಸ್ಥಿತಿ ಚಿಂತಾಜನಕವಾಗಿದ್ದು, ನಿಮ್ಹಾನ್ಸ್​ಗೆ ರವಾನಿಸಲಾಗಿದೆ.

ಇವರನ್ನು ಕ್ರಿಸ್ ಮತ್ತು ಲಿಯಾ ಎಂದು ಗುರುತಿಸಲಾಗಿದೆ. ಬ್ರಿಗೆಡ್ ರಸ್ತೆಯಲ್ಲಿರುವ ಫಿಪ್ತ್ ಅವೆನ್ಯೂ ಕಟ್ಟಡದಿಂದ ಸಾರ್ವಜನಿಕರ ಕಣ್ಣೆದುರೇ ಕೆಳಗೆ ಬಿದ್ದಿದ್ದಾರೆ.

60‌ ಅಡಿ‌ ಮೇಲಿಂದ ಬಿದ್ದ ಯುವಕ-ಯುವತಿ ಗಂಭೀರಗಾಯಗೊಂಡಿದ್ದರು. ತಕ್ಷಣ ನಿಮ್ಹಾನ್ಸ್ ಕರೆದೊಯ್ಯಲಾಗಿದೆ. ಕಬ್ಬನ್​ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.