Saturday, August 15, 2026

BDA Apartments

Home Front Page ಮೈಸೂರಲ್ಲಿ ಚುಮುಚುಮು ಚಳಿ, ಮಂಜಿನ ನಡುವೆ ‘ಯೋಗ ಸಂಭ್ರಮ’

ಮೈಸೂರಲ್ಲಿ ಚುಮುಚುಮು ಚಳಿ, ಮಂಜಿನ ನಡುವೆ ‘ಯೋಗ ಸಂಭ್ರಮ’

ಮೈಸೂರು, ಜನವರಿ 15, 2023 (www.justkannada.in): ಇಂದು ಬೆಳಗ್ಗೆ ಚುಮುಚುಮು ಚಳಿ, ಮಂಜಿನ ನಡುವೆ ನೆರೆದಿದ್ದ ಸಾವಿರಾರು ಮಕ್ಕಳು ಯೋಗ ಮಾಡಿ ಸಂಭ್ರಮಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆಯುಷ್ ಇಲಾಖೆ, ಮೈಸೂರು ಸಹಯೋಗದಲ್ಲಿ ರೇಸ್ ಕೋರ್ಸ್ ಮೈದಾನದಲ್ಲಿ ಆಯೋಜಿಸಿದ್ದ ಯೋಗಾಥಾನ್ ನಲ್ಲಿ ಸಾವಿರಾರು ಮಕ್ಕಳು ಪಾಲ್ಗೊಂಡಿದ್ದರು.

ನಗರದ ನಾನಾ ಶಾಲೆಗಳ ಮಕ್ಕಳು, ಯೋಗ ತರಬೇತಿ ಸಂಸ್ಥೆಗಳ ಶಿಕ್ಷಕರು, ಯೋಗ ಆಸಕ್ತರು ಪಾಲ್ಗೊಂಡು ಸಾಮೂಹಿಕ ಯೋಗಾಭ್ಯಾಸ ಮಾಡಿದರು.

ಇಂದು ಬೆಳಗ್ಗೆ ನಗರಾದ್ಯಂತ ಮಂಜು ಆವರಿಸಿತ್ತು. ಅದರಂತೆ ಚಾಮುಂಡಿಬೆಟ್ಟ, ರೇಸ್ ಕೋರ್ಸ್ ಆವರಣ ಮಂಜಿನಿಂದ ಆವರಿಸಿತ್ತು. ಚುಮುಚುಮು ಚಳಿ ನಡುವೆ ಎಲ್ಲರೂ ಯೋಗಾಭ್ಯಾಸ ಮಾಡಿದರು.