ಮಾಜಿ ಸಿಎಂ ಬಿಎಸ್ ವೈ ಬೆನ್ನಿಗೆ ನಿಂತ ಹೆಚ್.ಡಿಕೆ.

ಬೆಂಗಳೂರು,ಡಿಸೆಂಬರ್,30,2023(www.justkannada.in): ಕೊರೋನಾ ವೇಳೆ  40ಸಾವಿರ ಕೋಟಿ ರೂ. ಲೂಟಿ ಮಾಡಿದ್ದಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದ ಆರೋಪ ಮಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಬಿಎಸ್ ವೈ ಬೆನ್ನಿಗೆ ನಿಂತ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಬಿಎಸ್ ವೈ ಸರ್ಕಾರದಲ್ಲಿ  40 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಇದನ್ನು ಯಾರಾದರೂ ನಂಬೋದಕ್ಕೆ ಆಗುತ್ತಾ..? ಮೂರು ಸಾವಿರ ,ನಾಲ್ಕು ಸಾವಿರ ಕೋಟಿ ಎಂದರೇ ಒಪ್ಪೋಣ.  ಆದರೆ  40 ಸಾವಿರ ಕೋಟಿ ರೂ ಅಂದ್ರೆ ಒಪ್ಪಲು ಆಗುತ್ತಾ..?  ಇದು ರಾಜಕೀಯ ಕಾರಣಕ್ಕೆ ಕೊಟ್ಟ ಹೇಳಿಕೆ ಎಂದು ಬಿಎಸ್ ವೈ ಪರ ಬ್ಯಾಟ್ ಬೀಸಿದರು.

ನಾವೀಗ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ . ಬಿಜೆಪಿ ಪರವಾಗಿ ಎನ್ ಡಿಎ ಪರವಾಗಿ  ನಾನು ಹೇಳುತ್ತಿದ್ದೇನೆ. ಕೆಲವು ಹೇಳಿಕೆಗಳಿಗೆ ಮಹತ್ವ ಕೊಡಬೇಕಾಗಿಲ್ಲ. ಅಕ್ರಮ ನಡೆದೇ ಇಲ್ಲ ಅಂತಾ ಹೇಳಲ್ಲ.  40 ಸಾವಿರ ಕೋಟಿ ಅಕ್ರಮ ಅಂದರೇ ನಂಬಲು ಸಾಧ್ಯವೇ..?  ಯತ್ನಾಳ್ ಆರೋಪಕ್ಕೆ ನಾನೇ ಸ್ಪಷ್ಟನೆ ಕೊಡುತ್ತೇನೆ. ಕೊರೊನಾ ವೇಳೆ ಸರಿಯಾಗಿ ಕೆಲಸ ಮಾಡಿಲ್ಲ. ಎಲ್ಲಾ ಸರಿ ಇತ್ತು ಅಂತಾ ಹೇಳೋಕೆ ಹೋಗಲ್ಲ ಎಂದರು.

Key words: Yatnal -Corruption –Allegation-Former CM- H.D.Kumaraswamy –stands- with-BSY.