ವಿಜಯಪುರ,ಫೆಬ್ರವರಿ,16,2026 (www.justkannada.in): ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ವಸೂಲಿಗಿಳಿದಿದ್ದು ಯತೀಂದ್ರಗೆ ತರಬೇತಿ ಕೊಡುವ ಮಾಸ್ಟರ್ ನಮ್ಮವನೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುಟುಕಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯತೀಂದ್ರ ಕೂಡ ವಸೂಲಿಗಿಳಿದಿದ್ದು, ವಿಜಯೇಂದ್ರ ಬಳಿ ಯತೀಂದ್ರ ರಾತ್ರಿ ತರಬೇತಿ ಪಡೆಯುತ್ತಿದ್ದಾನೆ. ಹೇಗೆ ವಸೂಲಿ ಮಾಡಬೇಕು. ಹೇಗೆ ನಕಲಿ ಸಹಿ ಮಾಡಬೇಕು ಎಂದು ವಿಜಯೇಂದ್ರ ಬಳಿ ತರಬೇತಿ ಪಡೆಯುತ್ತಿದ್ದು ಯತೀಂದ್ರಗೆ ತರಬೇತಿ ಕೊಡುವ ಮಾಸ್ಟರ್ ನಮ್ಮವನೇ ಎಂದು ವ್ಯಂಗ್ಯವಾಡಿದ್ದಾರೆ.
ಹೀಗಾಗಿ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಡಲ್ಲ. ಡಿಕೆ ಶಿವಕುಮಾರ್ ಸಿಎಂ ಆಗಲ್ಲ. ವಿಧಾನಸಭಾ ವಿಸರ್ಜನೆಯೇ ಮುಂದಿನ ಹಾದಿ ಎಂದು ಶಾಸಕ ಯತ್ನಾಳ್ ಹೇಳಿದರು.
Key words: master, trains, Yatindra Siddaramaiah, MLA Yatnal







