ಅಹಿಂದ ನಾಯಕತ್ವ ಬಗ್ಗೆ ಹೇಳಿಕೆ: ಯತೀಂದ್ರ ಸಿದ್ದರಾಮಯ್ಯಗೆ ‘ಕೈ’ ಶಾಸಕ ತಿರುಗೇಟು

ತುಮಕೂರು,ಅಕ್ಟೋಬರ್,24,2025 (www.justkannada.in):  ಅಹಿಂದ ನಾಯಕತ್ವದ ಬಗ್ಗೆ ಮಾತನಾಡಿದ್ದ ಎಂಎಲ್ ಸಿ ಹಾಗೂ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಕುಣಿಗಲ್ ಶಾಸ ರಂಗನಾಥ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ರಂಗನಾಥ್,  ಯತೀಂದ್ರ ಸಿದ್ದರಾಮಯ್ಯ  ಪಕ್ಷದಲ್ಲಿ ಗೊಂದಲ ಮೂಡಿಸುವ ರೀತಿ ಹೇಳಿಕೆ ಕೊಡಬಾರದು. ಈ ರೀತಿಯ ಹೇಳಿಕೆಯಿಂದ ಗೊಂದಲ ಸೃಷ್ಠಿಯಾಗಬಾರದು. ನಾಯಕರಾಗಲು ಸೇವೆ ಮಾಡುವುದರಲ್ಲಿ  ದಾಖಲೆ ಸೃಷ್ಠಿಸಬೇಕು  ಎಂದರು.

2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂಬುದು ನನ್ನ ಆಸೆ.  ಯಾರೇ ಆಗಲಿ ಪಕ್ಷಕ್ಕೆ ಗೊಂದಲ ಮೂಡಿಸುವ ರೀತಿ ಹೇಳಿಕೆ ನೀಡಬಾರದು.  ಒ  ಡಿಸಿಎಂ  ಡಿಕೆ ಶಿವಕುಮಾರ್ ಸಿಎಂ ಆಗುವುದನ್ನ ಪಕ್ಷ ನಿರ್ಧಾರ ಮಾಡುತ್ತದೆ. ವರಿಷ್ಟರ ಆದೇಶವನ್ನ ನಾವು ಪಾಲಿಸುತ್ತೇವೆ ಎಂದರು.

Key words: Statement, Ahinda leadership, Yathindra Siddaramaiah, Congress MLA