ಡಿನ್ನರ್ ಮೀಟಿಂಗ್ ಮಾಡಿದ್ರೆ ಅದಕ್ಕೆ ನಾನೇನು ಮಾಡಲಿ: ಏನು ಹೇಳಬೇಕೋ ಹೇಳಿ ಆಗಿದೆ-ಯತೀಂದ್ರ ಸಿದ್ದರಾಮಯ್ಯ

ಬೆಳಗಾವಿ,ಡಿಸೆಂಬರ್,12,2025 (www.justkannada.in): ಡಿಸಿಎಂ ಡಿಕೆ ಶಿವಕುಮಾರ್ ಬಣದ ಸಚಿವರು ಶಾಸಕರು ನಿನ್ನೆ ಡಿನ್ನರ್ ಮೀಟಿಂಗ್ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ, ಡಿನ್ನರ್ ಮೀಟಿಂಗ್ ಮಾಡಿದರೆ ಅದಕ್ಕೆ ನಾನೇನು ಮಾಡಲಿ ಎಲ್ಲಾ ಎಂಎಲ್ ಎ ಸಚಿವರನ್ನು ಕರೆದು ಮೀಟಿಂಗ್ ಮಾಡುತ್ತಿದ್ದಾರೆ ಅದಕ್ಕೆ ನಾನೇನು ಮಾಡಲಿ ಎಂದು ಕೌಂಟರ್  ಕೊಟ್ಟರು.

ನಾಣು ಏನು ಹೇಳಬೇಕೋ ಹೇಳೀ ಆಗಿದೆ  ಬೇರೆಯವರು ಏನು ಹೇಳುತ್ತಾರೋ ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.

Key words: dinner meeting, Yathindra Siddaramaiah