ಮೈಸೂರು,ಜುಲೈ,26,2025 (www.justkannada.in): ಮುಡಾ ಕೇಸ್ ನಲ್ಲಿ ಸುಪ್ರೀಂ ಕೋರ್ಟ್ ನಿಂದ ಸಿಎಂ ಪತ್ನಿ ಪಾರ್ವತಿ ಅವರಿಗೆ ರಿಲೀಫ್ ಸಿಕ್ಕ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ನಾವು ಈ ಸಂದರ್ಭದಲ್ಲಿ ಕೇಳಲ್ಲ. ಆದರೆ ಸೈಟ್ ಗಳಿಂದಲೇ ನಮ್ಮ ತಂದೆಯ ರಾಜಕೀಯಕ್ಕೆ ಕಪ್ಪು ಚುಕ್ಕೆ ಬಂತು ಎಂಬ ನೋವು ನಮ್ಮ ತಾಯಿಗೆ ಇದೆ ಎಂದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಮೊದಲಿನಿಂದಲೂ ನಾವು ಇದನ್ನೇ ಹೇಳುತ್ತಿದ್ದೇವು. ಇಡಿ ರಾಜಕೀಯ ಕಾರಣಕ್ಕೆ ತನಿಖೆ ಮಾಡುತ್ತಿದೆ ಎಂಬುದು ನಮಗೆ ಗೊತ್ತಿತ್ತು. ಈಗ ನ್ಯಾಯಲಯ ಅದನ್ನೇ ಹೇಳಿದೆ. ವಿನಾಕಾರಣ ನಮ್ಮ ತಾಯಿಯ ವಿಚಾರವನ್ನ ರಾಜಕೀಯವಾಗಿ ಎಳೆದು ತರಲಾಯಿತು. ಕೊನೆಗೂ ನಮಗೆ ಕಾನೂನು ಹೋರಾಟದಲ್ಲಿ ನಮಗೆ ಜಯ ಸಿಕ್ಕಿದೆ. ಈ ತೀರ್ಪಿನಿಂದ ನಮ್ಮ ತಾಯಿಗೆ ಸಮಾದಾನ ತಂದಿದೆ. ಇದು ನಮಗೆ ಟಫ್ ಟೈಮ್ ಆಗಿರಲಿಲ್ಲ. ಆದರೆ ನಮ್ಮ ಮನಸ್ಸಿಗೆ ನೋವಾಗಿದ್ದು ಮಾತ್ರ ಸತ್ಯ. ಕಾಂಗ್ರೆಸ್ ಹೈ ಕಮಾಂಡ್ ಮತ್ತು ಕಾರ್ಯಕರ್ತರು ನಮ್ಮ ಪರ ಇದ್ದರು. ಹೀಗಾಗಿ ಇದರ ವಿರುದ್ಧ ಹೋರಾಟ ನಡೆಸಿದ್ದೇವೆ. ಇನ್ನಾದರೂ ಪ್ರತಿಪಕ್ಷಗಳು ಅಪಪ್ರಚಾರ ನಿಲ್ಲಿಸಲಿ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಈ ಸಂದರ್ಭದಲ್ಲಿ 14 ಸೈಟ್ ವಾಪಸ್ ಕೇಳುವುದಿಲ್ಲ. ಇನ್ನೂ ಕೂಡ ಈ ವಿಚಾರದ ಬಗ್ಗೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಮುಗಿಯಲಿ, ಆ ತೀರ್ಪು ಹೊರಬರಲಿ. ಆ ನಂತರ ಇದರ ಬಗ್ಗೆ ಚರ್ಚೆ ಮಾಡಿ ಇದರ ಬಗ್ಗೆ ನಿರ್ಧಾರ ಮಾಡುತ್ತೇವೆ. ಆ ಸೈಟ್ ಗಳಿಂದಲೇ ತಂದೆಯ ರಾಜಕೀಯಕ್ಕೆ ಕಪ್ಪು ಚುಕ್ಕೆ ಬಂತು ಎಂಬ ನೋವು ನಮ್ಮ ತಾಯಿಗೆ ಇದೆ. ಹೀಗಾಗಿ ಅದನ್ನ ವಾಪಸ್ ಕೊಟ್ಟರು. ಸುಪ್ರೀಂ ಕೋರ್ಟ್ ರಿಲೀಫ್ ಕೊಟ್ಟರೂ ಕೂಡ ನಾವು ಅದನ್ನ ವಾಸಸ್ ಕೇಳುವುದಿಲ್ಲ. ಈ ಸೈಟ್ ಗಳಲ್ಲಿ ಮನಿ ಲಾಂಡರಿಂಗ್ ಪ್ರಶ್ನೆಯೇ ಇಲ್ಲ. ಆದರೂ ಮನಿ ಲಾಂಡರಿಂಗ್ ಕೇಸ್ ಹಾಕಿದರು. ಇದರಿಂದ ತಾಯಿ ಮನನೊಂದು ಸೈಟ್ ಗಳನ್ನ ವಾಪಸ್ ಕೊಟ್ಟರು. ಕಾನೂನು ಪ್ರಕ್ರಿಯೆ ಮುಗಿಯಲಿ ಆಮೇಲೆ ನೋಡೊಣಾ ಎಂದರು.
ಮೈಸೂರಿನ ಅಭಿವೃದ್ಧಿಗೆ ನಾಲ್ವಡಿ ಮಹರಾಜರಿಗಿಂತ ಹೆಚ್ಚು ಅಥವಾ ಮಹರಾಜಷ್ಟೇ ಅನುದಾನ ಕೊಟ್ಟು ಅಭಿವೃದ್ಧಿ ಮಾಡಿದ್ದು ಸಿದ್ದರಾಮಯ್ಯ ಮಾತ್ರ. ಸಾಕಷ್ಟು ಅಭಿವೃದ್ಧಿಯನ್ನ ಸಿದ್ದರಾಮಯ್ಯ ಮಾಡಿದ್ದಾರೆ. ಅಭಿವೃದ್ಧಿ ಮಾಡಿರುವುದಕ್ಕೆ ಸಾಧನ ಸಮಾವೇಶ ಮಾಡಿದ್ದು. ಸುಮ್ಮನೇ ವಿಪಕ್ಷಗಳು ಟೀಕೆ ಮಾಡುತ್ತಾರೆ ಎಂದು ಕಿಡಿಕಾರಿದರು.
ಲೋಕಸಬಾ ಚುನಾವಣೆ ಮತದಾನದಲ್ಲಿ ಗೋಲ್ ಮಾಲ್ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಮೈಸೂರು ಕ್ಷೇತ್ರದಲ್ಲಿ ನಾವು ಸೋತಿದ್ದರೂ ಇಲ್ಲಿ ಆ ರೀತಿಯ ಯಾವ ಗೋಲ್ ಮಾಲ್ ಆಗಿಲ್ಲ. ಯಾವ ಊರುಗಳಿಂದಲೂ ನಮಗೆ ಆ ರೀತಿಯ ದೂರುಗಳು ನಮಗೆ ಬಂದಿಲ್ಲ. ಆ ರೀತಿಯಾಗಿದ್ದರೇ ಇಷ್ಟೊತ್ತಿಗೆ ನಮ್ಮ ಕಾರ್ಯಕರ್ತರೇ ಹೇಳಿ ಬಿಡುತ್ತಿದ್ದರು. ಕೆಲ ಲೋಕಸಭಾ ಕ್ಷೇತ್ರಗಳಲ್ಲಿ ಇದು ಆಗಿರಬಹುದೇನೋ. ಡಿ.ಕೆ ಶಿವಕುಮಾರ್ ಹೀಗಾಗಿ ಇದರ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ಸರ್ಕಾರ ತನಿಖಾ ಸಂಸ್ಥೆ ಹಾಗೂ ಆಯೋಗಗಳನ್ನ ದುರುಪಯೋಗ ಪಡಿಸಿಕೊಳ್ಳುವುದರಲ್ಲೂ ಎತ್ತಿದ್ದ ಕೈ ಹೀಗಾಗಿ ಅನುಮಾನವಿರುವ ಕ್ಷೇತ್ರಗಳ ಬಗ್ಗೆ ತನಿಖೆಯಾಗಲಿ ಎಂದು ತಿಳಿಸಿದರು.
Key words: Muda case, politics, Yathindra Siddaramaiah