ವಿಜಯಪುರ,ಜನವರಿ,22,2026 : ಭಕ್ತರ ಮನದಿಚ್ಛೆಯ ಸತ್ಯ ಅರಿತು, ಬೇಡಿದ ವರ ಕೊಡುವ ಭಕ್ತರ ಕಾಮದೇನುವಾಗಿ ನೆಲೆ ನಿಂತು ಹಿಂದೂ ಮುಸ್ಲೀಂರ ಸಾಮರಸ್ಯದ ಕೊಂಡಿಯಾಗಿ ಬೆಳೆದು ಬಂದ ದಾವಲ್ ಮಲ್ಲಿಕ್ ದೇವರ ಜಾತ್ರೆ ನೆರೆಯ ನಾಲ್ಕು ರಾಜ್ಶಗಳಲ್ಲಿ ಪ್ರಸಿದ್ದಿ ಪಡೆದಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸುಕ್ಷೇತ್ರ ಯಂಕಂಚಿಯಲ್ಲಿ ಸಂತ್ ದಾವಲ್ ಮಲ್ಲಿಕರು ಅನೇಕ ಪವಾಡಗಳನ್ನು ಮಾಡುವ ಮೂಲಕ ಈ ಭಾಗದಲ್ಲಷ್ಟೇಯಲ್ಲದೆ, ನೆರೆಯ ರಾಜ್ಶಗಳಲ್ಲಿ ಅಸಂಖ್ಶಾತ ಭಕ್ತರನ್ನು ಹೊಂದಿದ್ದಾರೆ.
ಜೀವಂತ ಪವಾಡ : ಜಾತಿ ಗೀಳು ಕಾಣದ ಭಕ್ತನ ಭಕ್ತಿಯೊಂದೇ ದೊಡ್ಡ ಶಕ್ತಿ. ಅದಕ್ಕೆ ಯಾವ ಕುಲ – ಮತವೂ ಇಲ್ಲ ಎಂಬ ಸಂದೇಶ ಸಾರಿರುವ ದಾವಲ್ ಮಲ್ಲಿಕರನ್ನು ನಂಬಿದ ಇಂಡಿ ತಾಲೂಕಿನ ಸಂಗೋಗಿಯ ಮಹಿಳೆಯೊಬ್ಬಳು ಕಳೆದ ಎಂಟು ವರ್ಷಗಳ ಹಿಂದೆ ತನ್ನ ಭಕ್ತಿಪೂರ್ವಕ ವರವ ಬೇಡಿ ಮಗುವನ್ನು ಕುದಿಯುವ ಅನ್ನದ ಪಾತ್ರೆಯಲ್ಲಿ ಎದ್ದುವೆ ಎಂದು ಬೇಡಿಕೊಂಡಿದ್ದಳಂತೆ ಅದರಂತೆ ಎರಡು ವರ್ಷದ ಹೆಣ್ಣು ಮಗುವನ್ನು ಪೂಜಾರಿ ಕೈಗಿತ್ತು ಭಕ್ತಿಪರವಶಳಾದ ತಾಯಿ ದಾವಲ್ ಮಲ್ಲಿಕರನ್ನು ಮನದಲ್ಲಿ ನೆನೆಯುತ್ತಲಿದ್ದಳು.
ಆಗ ಪಕ್ಕದಲ್ಲಿ ಕುದಿಯುತ್ತಿದ್ದ ಅನ್ನದ ಪಾತ್ರೆಗೆ ಹೆಣ್ಣು ಮಗುವನ್ನು ಎದ್ದಿದ ಪೂಜಾರಿ. ದಾವಲ್ ಮಲ್ಲಿಕ್ ದೋಸ್ತರ್ ಹೋ ದಿನ್ ಎಂಬ ದ್ವನಿ ಮೊಳಗುತ್ತಿತ್ತು. ಭಕ್ತಿ ಪರೀಕ್ಷೆಯಲ್ಲಿ ದೇವರ ಮನಗೆದ್ದ ಭಕ್ತೆ ಇಂದಿಗೂ ಸಂತನ ಲೀಲೆಯೋ ..ಪವಾಡವೋ ಯಾರು ಕಾಣ ಎಂಬಂತೆ ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದ ಘಟನೆ ಇನ್ನೂ ಮರೆಯಾಗಿಲ್ಲ.
ನಾಣ್ಯ ಹಚ್ಚವ ನಂಬಿಕೆ : ಈ ಹಿಂದೆ ಭಕ್ತರು ತಮ್ಮ ಬಯಕೆ ಈಡೇರುವುದೇ ಎಂಬ ನಂಬಿಕೆ ಬಲಗೊಳಿಸಲು ದರ್ಗಾದ ಗೋಡೆಗಳಿಗೆ ನಾಣ್ಯಗಳನ್ನು ಅಂಟಿಸುತ್ತಿದ್ದರು. ಸದ್ಯ ಆಧುನೀಕರಣಗೊಂಡಿರುವ ಮೂಲ ದೇವಸ್ಥಾನದಲ್ಲಿ ದರ್ಗಾ ಸುತ್ತಲೂ ಗೋಡೆಗಳಿಗೆ ಮಾರ್ಬಲ್ ಹಾಕಲಾಗಿದ್ದು. ಈಗಲು ಭಕ್ತರು ಅಂಟಿಸುವ ನಾಣ್ಯಗಳು ಅಂಟಿ ನೈಜ ಭಕ್ತರ ಭವಿಷ್ಶದ ನಂಬಿಕೆ ಬಲಗೊಳಿಸುತ್ತಲಿದೆ.
ಹಿಂದೂ ಪೂಜಾರಿ : ಹಲವಾರೂ ವರ್ಷಗಳಿಂದಲೂ ಸೂಫಿ ಸಂತ ದಾವಲ್ ಮಲ್ಲಿಕ್ ಮುಸ್ಲಿಂ ಆದರೂ ದೇವಸ್ಥಾನ ಪೂಜಾರಿಕೆ ಮಾತ್ರ ಹಿಂದುಗಳದ್ದಾಗಿದೆ. ಗ್ರಾಮದ ಮುಜಾವರ ಮನೆತನ ತುಂಬ ಭಕ್ತಿ ಶ್ರದ್ದೆಯಿಂದ ಸಂತನ ಸಂದೇಶದಂತೆ ಚಾಚು ತಪ್ಪದೆ ಎಲ್ಲ ವರ್ಗ, ಧರ್ಮಗಳ ಸಂಗಮವನ್ನು ಸಾಕ್ಷೀಯಾಗಿರಿಸಿಕೊಂಡು ಹಿಂದು ಪೂಜಾರಿಗಳಾಗಿ ಭಕ್ತಿ ಸೇವೆ ಸಲ್ಲಿಸುತ್ತಿದ್ದಾರೆ.
ವಾರದಲ್ಲಿ ಎರಡು ದಿನ ಹರಕೆ
ಪ್ರತಿ ಸೋಮವಾರ ಮತ್ತು ಗುರುವಾರ ಎರಡು ದಿನ ಮಲ್ಲಿಕ್ ರ ಭಕ್ತರು ತಮ್ಮ ಬಲಿ ಹರಕೆ ತೀರಿಸುತ್ತಾರೆ. ಅಂದು ದೇವಸ್ಥಾನದಲ್ಲಿ ಜನ ಜಾತ್ರೆಯೇ ನೆರೆದಿರುತ್ತದೆ.
ವಿಶೇಷ ಸಂಪ್ರದಾಯ : ಸೂಫಿ ಸಂತ್ ದಾವಲ್ ಮಲೀಕ್ ಮುಸ್ಲಿಂ ಆದರೂ ಪೂಜಾರಿಕೆ ಮಾತ್ರ ಹಿಂದುಗಳಿದ್ದು, ಇದು ಹಲವಾರು ವಷ೯ಗಳಿಂದಲೂ ನಡೆದು ಬಂದ ಸಂಪ್ರದಾಯ.ಇಲ್ಲಿನ ದೈವದ ಭಕ್ತರಲ್ಲಿ ಬಾವಾಗಳು, ಜೋಗಪ್ಪಗಳು ಹಾಗೂ ಪೂಜಾರಿಗಳು ಇರುವುದು ವಿಶೇಷ.
ಪವಾಡ ಪುರಷ ನೂರಾರು ವರ್ಷಗಳ ಹಿಂದೆ ನೆಲೆಸಿದ್ದ ಸೊಫಿ ಸಂತ್ ದಾವಲ್ ಮಲೀಕರು ಪವಾಡಗಳಿಂದ ಜನರನ್ನು ಉದ್ಧರಿಸುತ್ತ, ನಂಬಿ ಬಂದವರಿಗೆ ದೇವರಾಗಿ, ಮೌಢ್ಶ ಕಂಡು ಬಂದವರಿಗೆ ಮೌನಿಯಾಗಿ ಸಂತೈಸುತ್ತಿದ್ದರು.
ವಿವಿಧ ಧಾರ್ಮಿಕ ಕಾರ್ಯಕ್ರಮಗಳು :
ಯಂಕಂಚಿ ದಾವಲ್ ಮಲೀಕ್ ಜಾತ್ರೆ ನಿಮಿತ್ಶ ಜ.22 ರಂದು ಮುಜಾವರ ಮನೆಯಿಂದ ದೇವರ ಪಲ್ಲಕ್ಕಿ ಉತ್ಸವವು ರಾತ್ರಿ 1 ಗಂಟೆಗೆ ವಿಜೃಂಭಣೆಯಿಂದ ಹೊರಟು ಬೆಳಗ್ಗೆ 3.15 ಕ್ಕೆ ದೇವಸ್ಥಾನ ತಲುಪುವುದು. ನಂತರ ಬೆಳಗ್ಗೆ 4 ಗಂಟೆಗೆ ಗಂಧ ಏರುವುದು. ಜ.23 ರಂದು ದೀಪೋತ್ಸವ ವಿಶೇಷ ಜಾತ್ರೆ ನಡೆಯಲಿದೆ. ಜ. 24ರಂದು ಬೆಳಗ್ಗೆ 8 ರಿಂದ ರಾತ್ರಿ 5 ಗಂಟೆವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜ.25ರಂದು ಬೆಳಗ್ಗೆ 10 ಗಂಟೆಗೆ ಭಾರ ಎತ್ತುವ ಸ್ಪರ್ಧೆ ಹಾಗೂ ಸಂಜೆ 5 ಗಂಟೆಗೆ ಕುಸ್ತಿ ಪಂದ್ಶ ನಡೆಯಲಿದೆ. ಜ.26 ರಂದು ದೇವಸ್ಥಾನದಿಂದ ರಾತ್ರಿ 10 ಗಂಟೆಯಿಂದ ದೇವರ ಪಲ್ಲಕ್ಕಿ ಉತ್ಸವವು ರಾತ್ರಿ 1.30 ಗಂಟೆಯವರೆಗೆ ಮುಜಾವರ ಮನೆಗೆ ಬಹು ವಿಜೃಂಭಣೆಯಿಂದ ತಲುಪುವುದು. ಜ.23ರಿಂದ 26ರವರೆಗೆ ದನಗಳ ಜಾತ್ರೆ ನಡೆಯಲಿದೆ.
ಮಲ್ಲಿಕಾರ್ಜುನ ಎನ್.ಕೆೆಂಭಾವಿ
Key words: Yankanchi, Daval Mallik Fair, Sindagi







