ಮಾಜಿ ಸಿಎಂ ಬಿಎಸ್ ವೈ ಬಂಧನಕ್ಕೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ರಿಟ್.

ಬೆಂಗಳೂರು,ಜೂನ್,12,2024 (www.justkannada.in): ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ತಿಂಗಳಾದರೂ ಪೊಲೀಸರಿಂದ ಕ್ರಮವಿಲ್ಲ. ಹೀಗಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನ ಬಂಧಿಸಲು ನಿರ್ದೇಶನ ನೀಡಿ ಎಂದು ಮನವಿ ಮಾಡಿ ಸಂತ್ರಸ್ತೆ ಸಹೋದರ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಈ ಸಂಬಂಧ ಹೈಕೋರ್ಟ್ ಗೆ  ರಿಟ್ ಅರ್ಜಿ ಸಲ್ಲಿಸಿರುವ ಸಂತ್ರಸ್ತೆ ಸಹೋದರ, ಘಟನೆ ನಡೆದು ಹಲವು ತಿಂಗಳಾದರೂ ಪೊಲೀಸರಿಂದ ಕ್ರಮವಿಲ್ಲ. ಬಿಎಸ್ ಯಡಿಯೂರಪ್ಪನ್ನ ಬಂಧಿಸಿ ವಿಚಾರಣೆಗೊಳಪಡಿಸಿಲ್ಲ. ಬಿಎಸ್ ವೈ ಮನೆಯ ಸಿಸಿಟಿವಿ ದೃಶ್ಯಾವಳಿ ಸೀಜ್ ಮಾಡಿಲ್ಲ. ಕನಿಷ್ಠ 41A ಅಡಿ ನೋಟಿಸ್  ನೀಡಿ  ಬಿಎಸ್ ವೈರನ್ನ  ವಿಚಾರಣೆಗೆ ಕರೆದಿಲ್ಲ.

ಈ ಮಧ್ಯೆ ದೂರು ನೀಡಿದ ಸಂತ್ರಸ್ತೆಯ ತಾಯಿ ಮೃತಪಟ್ಟಿದ್ದಾರೆ. ಲೈಂಗಿಕ ದೌರ್ಜನ್ಯನಡೆದು ಹಲವು ದಿನಗಳಾದರೂ ನ್ಯಾಯ ಸಿಕ್ಕಿಲ್ಲ ಹೀಗಾಗಿ  ಬಿಎಸ್ ಯಡಿಯೂರಪ್ಪರನ್ನ ಬಂಧಿಸಲು ನಿರ್ದೇಶನ ನೀಡಿ ಎಂದು ಸಂತ್ರಸ್ತೆ ಸಹೋದರ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.

Key words: Writ, High Court, arrest, former CM, BSY