ನಾಲ್ವರು ಸಚಿವರಿಂದ ಹಂಪಿ ವಿರೂಪಾಕ್ಷ, ಭುವನೇಶ್ವರಿ ದೇವಿಗೆ ಪೂಜೆ, ಮಣ್ಣು ಸಂಗ್ರಹ.

ಹೊಸಪೇಟೆ, ನವೆಂಬರ್,4,2022(www.justkannada.in):  ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣದ ಹಿನ್ನೆಲೆಯಲ್ಲಿ ಶುಕ್ರವಾರ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ, ಕಂದಾಯ ಸಚಿವ ಆರ್ ಅಶೋಕ ಸೇರಿದಂತೆ ನಾಲ್ವರು ಸಚಿವರು ಹಂಪಿಗೆ ಬಂದು ಇಲ್ಲಿನ ಪವಿತ್ರ ಮಣ್ಣು ಕೊಂಡೊಯ್ದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ಯುವಜನ ಕ್ರೀಡಾ ಸಚಿವ ನಾರಾಯಣಗೌಡ, ಸಂಸದ ವೈ.ದೇವೇಂದ್ರಪ್ಪ ಈ ಸಂದರ್ಭದಲ್ಲಿ ಇದ್ದರು. ಹಂಪಿ ವಿರೂಪಾಕ್ಷೇಶ್ವರ, ಭುವನೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಿದ ಸಚಿವರು, ಬಳಿಕ ಮಣ್ಣು ಸಂಗ್ರಹಿಸಿದರು. ನಾಡಪ್ರಭು ಕೆಂಪೇಗೌಡ, ಶ್ರೀ ಕೃಷ್ಣದೇವರಾಯನ ಹೆಸರಲ್ಲಿ ಅರ್ಚನೆ ಮಾಡಿಸಿದರು.

ಇದಕ್ಕೂ ಮುನ್ನ ಸಚಿವರನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬಿಜೆಪಿ ಮುಖಂಡರು ಸ್ವಾಗತಿಸಿದರು. ಅಲ್ಲಿಂದ ಹಂಪಿ ವರೆಗೆ ಬೈಕ್ ಜಾಥಾ ನಡೆಸಿದರು. ಅಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಸಚಿವರು ವಿರೂಪಾಕ್ಷ ದೇಗುಲದ ವರೆಗೆ‌ ಹೆಜ್ಜೆ ಹಾಕಿದರು.

Key words: Worship -Hampi –Virupaksha- four ministers