Wednesday, September 16, 2026

BDA Apartments

ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿಗೆ ಜುಂಬಾ ತರಬೇತಿ ! BDA JK_Adv BDA Adv
Home Front Page ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿಗೆ ಜುಂಬಾ ತರಬೇತಿ !

ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿಗೆ ಜುಂಬಾ ತರಬೇತಿ !

ಮೈಸೂರು, ಮೇ 23, 2023 (www.justkannada.in): ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದ ಸಮುದಾಯ ವೈದ್ಯಶಾಸ್ತ್ರ ವಿಭಾಗ, ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯ, ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಸಹಯೋಗದೊಂದಿಗೆ ಶ್ರೀ ರಾಜೇಂದ್ರ ಆಡಿಟೋರಿಯಂನಲ್ಲಿ ಜುಂಬಾ (ಡ್ಯಾನ್ಸ್ ಫಿಟೈಸ್) ತರಗತಿಯನ್ನು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗಾಗಿ ಹಮ್ಮಿಕೊಳ್ಳಲಾಗಿತ್ತು.ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿಗೆ ಜುಂಬಾ ತರಬೇತಿ ! World Hypertension Day...

ಮುಖ್ಯ ಅತಿಥಿಗಳಾದ ಡಾ. ಎಚ್. ಬಸವನಗೌಡಪ್ಪ, ಪ್ರಾಂಶುಪಾಲರು, ಗೌರವ ಅತಿಥಿಗಳಾದ ಡಾ. ಸುಮಾ ಎಂ ಎನ್, ಉಪ ಪ್ರಾಂಶುಪಾಲರು (ಫ್ರೀ ಕ್ಲಿನಿಕಲ್), ಡಾ. ಪ್ರವೀಣ್ ಕುಲಕರ್ಣಿ, ಉಪ ಪ್ರಾಂಶುಪಾಲರು (ಪ್ಯಾರಾ ಕ್ಲಿನಿಕಲ್), ಶ್ರೀ ಎಸ್.ಆರ್. ಸತೀಶ್ ಚಂದ್ರ, ಆಡಳಿತ ಅಧಿಕಾರಿಗಳು, ಸಂಯೋಜಕರಾದ ಡಾ. ಸುನಿಲ್ ಕುಮಾರ್ ಡಿ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಮತ್ತು ಡಾ. ಅಮೋಘಶ್ರೀ ಸಹಾಯಕ ಪ್ರಾಧ್ಯಾಪಕರು, ಸಮುದಾಯ ವೈದ್ಯಶಾಸ್ತ್ರ ವಿಭಾಗ, ಇವರ ಸಮ್ಮುಖದಲ್ಲಿ ನುರಿತ ಜುಂಬಾ ತರಬೇತುದಾರರಾಧ ಶ್ರೀ ಅರ್ಜುನ್, ಡ್ಯಾನ್ಸ್ ಫಾರ್ ಯು ಇನ್ಸಿಟ್ಯೂಟ್, ದಟ್ಟಗಳ್ಳಿ ಮೈಸೂರು, ಜುಂಬಾ ತರಗತಿ ನಡೆಸಿಕೊಟ್ಟರು. ಸುಮಾರು 100 ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.