ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್-ವೆಸ್ಟ್ ಇಂಡೀಸ್ ಪಂದ್ಯ ಇಂದು

ಲಂಡನ್, ಜೂನ್ 14, 2019 (www.justkannada.in): ಐಸಿಸಿ ವಿಶ್ವಕಪ್ 2019 ಟೂರ್ನಿಯ ಪಂದ್ಯದಲ್ಲಿ ಇಂದು ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ.

ಇಂಗ್ಲೆಂಡ್ ತಂಡ ಉತ್ತಮ ಸ್ಥಿತಿಯಲ್ಲಿದ್ದು, ಆಡಿರುವ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದು 4 ನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ಮೂರು ಪಂದ್ಯಗಳಲ್ಲಿ ಒಂದು ಗೆಲುವು ಸಾಧಿಸಿ 6 ನೇ ಸ್ಥಾನದಲ್ಲಿದೆ. ಹೀಗಾಗಿ ವೆಸ್ಟ್ ಇಂಡೀಸ್ ಗೆ ಇದು ಮಹತ್ವದ ಪಂದ್ಯವಾಗಿದ್ದು, ಗೆಲ್ಲುವ ಒತ್ತಡದಲ್ಲಿದೆ.

ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಆಂಗ್ಲ ಪಡೆ ಕಳೆದ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ 106 ರನ್ ಗಳ ಭರ್ಜರಿ ಗೆಲುವು ಸಾಧಿಸಿತ್ತು. ಜೇಸನ್ ರಾಯ್, ಜೋ ರೂಟ್, ಜಾಸ್ ಬಟ್ಲರ್, ಬೆನ್ ಸ್ಟೋಕ್ಸ್ ಭರ್ಜರಿ ಫಾರ್ಮ್ ನಲ್ಲಿರುವುದ ಇಂಗ್ಲೆಂಡ್ ಗೆ ಪ್ಲಸ್ ಪಾಯಿಂಟ್ ಆಗಿದೆ.
ಇನ್ನು ವೆಸ್ಟ್ ಇಂಡೀಸ್ ಗೆಲುವು ಸೋಲಿನ ಮಿಶ್ರ ಅನುಭವ ಹೊಂದಿದ್ದು, ಕ್ರಿಸ್ ಗೇಲ್, ಶಾಯ್ ಹೋಪ್, ಹೆಟ್ ಮೇರ್, ಆಯಂಡ್ರೋ ರಸೆಲ್ ರಂತಹ ಘಟಾನುಘಟಿ ಬ್ಯಾಟ್ಸ್ ಮೆನ್ ಗಳೇ ಇದ್ದರೂ ಆಡುವಲ್ಲಿ ವಿಫಲರಾಗುತ್ತಿದ್ದಾರೆ.