ವಿಶ್ವಕಪ್ ಕ್ರಿಕೆಟ್: ವಿರಾಟ್ ಕೊಯ್ಲಿ ಅಂಪೈರ್’ಗೆ ಕೈ ಮುಗಿದ ವೀಡಿಯೋ ವೈರಲ್ !

ಸೌತಾಂಪ್ಟನ್ , ಜೂನ್ 23,2019 (www.justkannada.in): ವಿಶ್ವಕಪ್ ಟೂರ್ನಿಯ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆಕ್ರೋಶದಲ್ಲಿ ಅಂಪೈರ್‌ಗೆ ಕೈ ಮುಗಿದು ಕೇಳಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೆಚ್ಚು ಅಗ್ರೇಷನ್ ಆಗಿ ಕಾಣಿಸಿಕೊಂಡಿದ್ದರು. ತಮ್ಮ ಭಾವನೆಯನ್ನು ವ್ಯಕ್ತಪಡಿಸಲು ಎಂದೂ ಹಿಂಜರಿಯದ ಕೊಹ್ಲಿ ಡಿಆರ್ಎಸ್ ಮನವಿ ತಪ್ಪಿದಾಗ ಅಂಪೈರ್ ಮುಂದೆಯೇ ಕೈ ಮುಗಿದ ಘಟನೆ ನಡೆದಿದೆ.

ಆಫ್ಘಾನ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 11 ರನ್ ಗಳ ವಿರೋಚಿತ ಗೆಲುವು ಸಾಧಿಸಿತ್ತು. ಆದರೆ ಕ್ರಿಕೆಟ್ ಶಿಶು ವಿರುದ್ಧ ಸೋಲಿನ ಹತಾಶೆಯಲ್ಲಿದ್ದಾಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊಂಚ ಅಗ್ರೇಸೀವ್ ಆಗಿ ಕಾಣಿಸಿಕೊಂಡಿದ್ದರು.
ಆದರೆ ಇದಕ್ಕೆ ನೆಟಿಗರು ಆಕ್ರೋಶಿತಗೊಂಡಿದ್ದು ವಿರಾಟ್ ಕೊಹ್ಲಿ ಟ್ರೋಲ್ ಮಾಡುತ್ತಿದ್ದಾರೆ.