ವಿಶ್ವಕಪ್ ಕ್ರಿಕೆಟ್ : ಟೀಂ ಇಂಡಿಯಾಗೆ ಆರಂಭದಲ್ಲೇ ವಿಘ್ನ !

ಬೆಂಗಳೂರು, ಅಕ್ಟೋಬರ್ 06, 2023 (www.justkannada.in): ವಿಶ್ವಕಪ್ ಕ್ರಿಕೆಟ್ ಗೆ ಭರ್ಜರಿ ಸಿದ್ಧತೆ ನಡೆಸಿರುತ್ತಿರುವ ಟೀಂ ಇಂಡಿಯಾಗೆ ಆರಂಭದಲ್ಲೇ ವಿಘ್ನ ಕಾಡಿದೆ.

ಆಸ್ಟ್ರೇಲಿಯ ವಿರುದ್ಧದ ಏಕದಿನ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಶುಭಮನ್ ಗಿಲ್ ಆಡುವುದು ಅನುಮಾನವಾಗಿದೆ.

ಗಿಲ್ ಡೆಂಗ್ಯೂನಿಂದ ಬಳಲುತ್ತಿದ್ದು, ಭಾನುವಾರ ಆಸ್ಟ್ರೇಲಿಯ ವಿರುದ್ಧ ನಡೆಯುವ ಭಾರತದ ಮೊದಲ ವಿಶ್ವಕಪ್ ಪಂದ್ಯದಲ್ಲಿ ಹೊರಗುಳಿಯಲಿದ್ದಾರೆ.

ಚನ್ನೈಗೆ ಬಂದಿಳಿದ ನಂತರ ಶುಭ್‌ಮನ್‌ಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ವೈದ್ಯರು ಅವರನ್ನು ತೀವ್ರ ತಪಾಸಣೆಗೆ ಒಳಪಡಿಸಿದ್ದು, ಡೆಂಗೆ ಇರುವುದು ದೃಢಪಟ್ಟಿದ್ದು, ಇಂದು ಹೆಚ್ಚುವರಿ ಪರೀಕ್ಷೆಗಳು ನಡೆಯಲಿವೆ.

ಒಂದು ವೇಳೆ ಗಿಲ್ ಅನಾರೋಗ್ಯದಿಂದ ಪಂದ್ಯ ಆಡಲು ವಿಫಲರಾದರೆ, ಯುವ ಆಟಗಾರ ಇಶಾನ್ ಕಿಶನ್ ಓಪನರ್ ಆಗಬಹುದಾಗಿದೆ.