ವಿಶ್ವಕಪ್ ಕ್ರಿಕೆಟ್: ಯುವತಿಯರಿಂದಲೇ ತುಂಬಿಹೋಗಲಿದೆ ಕ್ರೀಡಾಂಗಣಗಳು !

0
250

ಲಂಡನ್‌, ಮೇ 28, 2019 (www.justkannada.in): ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಟಿಕೆಟ್‌ ಭರ್ಜರಿಯಾಗಿ ಮಾರಾಟವಾಗುತ್ತಿದೆ ಎಂದು ಐಸಿಸಿ ತಿಳಿಸಿದೆ.

ಈವರೆಗೆ ಪುರುಷರು 2 ಲಕ್ಷಕ್ಕೂ ಹೆಚ್ಚು ಟಿಕೆಟ್‌ ಖರೀದಿಸಿದರೆ, ವನಿತಾ ಅಭಿಮಾನಿಗಳು ಒಂದು ಲಕ್ಷಕ್ಕೂ ಹೆಚ್ಚು ಟಿಕೆಟ್‌ ಖರೀದಿಸಿದ್ದಾಗಿ ಕೂಟದ ನಿರ್ದೇಶಕ ಸ್ಟೀವ್‌ ಎಲ್ವರ್ತಿ ಹೇಳಿದ್ದಾರೆ.

ಇದು ವಿಶ್ವಕಪ್‌ ಇತಿಹಾಸದ ಅತ್ಯಂತ ದೊಡ್ಡ ಮಟ್ಟದ ಟಿಕೆಟ್‌ ಮಾರಾಟವಾಗಿದೆ. ಒಂದು ಲಕ್ಷದ ಹತ್ತು ಸಾವಿರ ವನಿತೆಯರೇ ಟಿಕೆಟ್‌ ಖರೀದಿಸಿರುವುದು ವಿಶೇಷ.