Tuesday, September 22, 2026

BDA Apartments

ಕಿರಿಕ್ ಬೆಡಗಿ ರಶ್ಮಿಕಾ ಮಂದಣ‍್ಣ ಈಗ ನ್ಯಾಷನಲ್ ಕ್ರಷ್ ! BDA JK_Adv BDA Adv
Home Front Page ವಿಶ್ವಕಪ್ ಕ್ರಿಕೆಟ್: ಇಂದು ಆಫ್ರಿಕಾ ವಿರುದ್ಧ ಅಖಾಡಕ್ಕೆ ಟೀಂ ಇಂಡಿಯಾ

ವಿಶ್ವಕಪ್ ಕ್ರಿಕೆಟ್: ಇಂದು ಆಫ್ರಿಕಾ ವಿರುದ್ಧ ಅಖಾಡಕ್ಕೆ ಟೀಂ ಇಂಡಿಯಾ

ಲಂಡನ್, ಜೂನ್ 06, 2019 (www.justkannada.in): ವಿಶ್ವಕಪ್ ಕ್ರಿಕೆಟ್ ಮಹಾಯುದ್ಧಕ್ಕೆ ಇಂದು ಭಾರತ ಪದಾರ್ಪಣೆ ಮಾಡಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಸೆಣೆಸಲು ಟೀಂ ಇಂಡಿಯಾ ಸಜ್ಜಾಗಿದೆ. ಭಾರತ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗುವ ಸಾಧ್ಯತೆಯಿದೆ.

ಇದೇ ಮೊದಲ ಬಾರಿ ವಿಶ್ವಕಪ್ ಹೋರಾಟದಲ್ಲಿ ನಾಯಕತ್ವ ನಿಭಾಯಿಸುತ್ತಿರುವ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣಿದೆ. ಕೊಹ್ಲಿ ದಾಖಲೆ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

1,563 ದಿನಗಳ ನಂತ್ರ ವಿಶ್ವಕಪ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತ ಮುಖಾಮುಖಿಯಾಗ್ತಿದೆ. ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸುವುದು ಕೊಹ್ಲಿ ಮೊದಲ ಗುರಿ. ಕೊಹ್ಲಿ ಈ ಪಂದ್ಯದಲ್ಲಿ ಗೆಲುವು ಸಾಧಿಸಿದ್ರೆ, ವಿಶ್ವಕಪ್ ನ ಮೊದಲ ನಾಯಕತ್ವದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದಂತಾಗುತ್ತದೆ. ಅವ್ರ ನಾಯಕತ್ವದ ವೃತ್ತಿ ಜೀವನದಲ್ಲಿ 50ನೇ ಗೆಲುವು ಕೂಡ ಇದಾಗಲಿದೆ.