ವೈದ್ಯರು ಹಳ್ಳಿಗಳಲ್ಲಿ ಸೇವೆ ಮಾಡಿ- ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ

ಮೈಸೂರು, ನವೆಂಬರ್,11,2020(www.justkannada.in):  ಶೇ.70 ರಷ್ಟು ವೈದ್ಯರು ನಗರಗಳಲ್ಲಿ ನೆಲೆಸಲು ಬಯಸುತ್ತಾರೆ. ಆದರೆ ಶೇ.70 ರಷ್ಟು ಜನರು ಹಳ್ಳಿಗಳಲ್ಲಿ ಜೀವಿಸುತ್ತಿದ್ದು, ಇವರಿಗಾಗಿ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.

ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 11 ನೇ ಘಟಿಕೋತ್ಸವದಲ್ಲಿ ಮಾತನಾಡಿದ ಸಚಿವ ಸುಧಾಕರ್, “ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ವ್ಯಾಸಂಗ ಪೂರ್ಣಗೊಳಿಸಿದ ನಂತರ ಹಳ್ಳಿಗಳಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ವರ್ಷ 2,500 ವೈದ್ಯರು ವ್ಯಾಸಂಗ ಮುಗಿಸಲಿದ್ದಾರೆ. ಮಾನವೀಯತೆ ಹಾಗೂ ಜವಾಬ್ದಾರಿಯಿಂದ ಈ ಅಂಶ ಮನಗಂಡು, ಹಳ್ಳಿಗಳಲ್ಲಿ ಕಾರ್ಯನಿರ್ವಹಿಸಬೇಕು” ಎಂದು ಕೋರಿದರು.kannada-journalist-media-fourth-estate-under-loss

“ಕೆಲ ವೈದ್ಯರು ಈ ನಿಯಮ ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಂತಹವರು ಪ್ರಕರಣ ಹಿಂಪಡೆದು ಹಳ್ಳಿಗಳಲ್ಲಿ ಸೇವೆ ಸಲ್ಲಿಸಬೇಕು. ಹೊರ ದೇಶಗಳ ಸಂಸ್ಥೆಗಳಲ್ಲೂ ವ್ಯಾಸಂಗ ಮಾಡಬಹುದು. ಆದರೆ ಮರಳಿ ಬಂದು ನಮ್ಮ ದೇಶದಲ್ಲೇ ಸೇವೆ ಸಲ್ಲಿಸಬೇಕು” ಎಂದರು.

“ರಾಜ್ಯದಲ್ಲಿ 11-12,000 ಜನರಿಗೆ ಒಬ್ಬ ವೈದ್ಯರಿದ್ದಾರೆ. ಸಾವಿರ ಜನರಿಗೆ ಒಂದು ಹಾಸಿಗೆ ಸೌಲಭ್ಯವಿದೆ. 1 ಸಾವಿರ ಜನರಿಗೆ ಒಬ್ಬ ವೈದ್ಯ ಹಾಗೂ ಒಂದು ಸಾವಿರ ಜನರಿಗೆ 2.7 ಹಾಸಿಗೆ ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 150 ಮೆಡಿಕಲ್ ಕಾಲೇಜುಗಳನ್ನು ಆರಂಭಿಸಲು ಅನುಮತಿ ನೀಡಿದ್ದಾರೆ. ಸ್ನಾತಕೋತ್ತರಕ್ಕೆ ಹೊಸದಾಗಿ 17,000 ಸೀಟುಗಳನ್ನು ಸೇರಿಸಲಾಗಿದೆ. ಇವೆಲ್ಲ ಕ್ರಮಗಳಿಂದ ಆರೋಗ್ಯ ಕ್ಷೇತ್ರ ಬಲವಾಗಿದೆ” ಎಂದು ವಿವರಿಸಿದರು.

“ಕೋವಿಡ್ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಜಾಗತಿಕ ಕೋವಿಡ್ ಮರಣ ಪ್ರಮಾಣ ಶೇ.3.5 ರಿಂದ 3.8 ರಷ್ಟಿದೆ. ದೇಶದಲ್ಲಿ ಶೇ.1.4 ಹಾಗೂ ರಾಜ್ಯದಲ್ಲಿ ಶೇ.1.3 ಇದೆ. ಪಾಸಿಟಿವಿಟಿ ದರವು ಕೆಲ ಜಿಲ್ಲೆಗಳಲ್ಲಿ ಶೇ.19, ಮತ್ತೆ ಕೆಲ ಜಿಲ್ಲೆಗಳಲ್ಲಿ ಶೇ.14 ರಷ್ಟಿತ್ತು. ಈಗ ಪಾಸಿಟಿವಿಟಿ ದರ ಶೇ.2.2 ಗೆ ಇಳಿಕೆಯಾಗಿದೆ” ಎಂದು ತಿಳಿಸಿದರು.

ಆರೋಗ್ಯ ಕ್ಷೇತ್ರ, ಸಂಶೋಧನೆಯಲ್ಲಿ ಜೆಎಸ್‍ಎಸ್ ವಿಶ್ವವಿದ್ಯಾಲಯ ಕರ್ನಾಟಕಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರು ತಂದುಕೊಟ್ಟಿದೆ. ಜೆಎಸ್‍ಎಸ್ ಸಂಸ್ಥೆಯು ನಳಂದ, ತಕ್ಷಶಿಲಾ ಮಾದರಿಯಲ್ಲಿ ಬೆಳೆಯಲಿದೆ. ಕೋವಿಡ್ ವಿರುದ್ಧ ಇನ್ನೂ ಹೋರಾಟ ನಡೆಯುತ್ತಿದ್ದು, 1,800 ಹಾಸಿಗೆಯ ಆಸ್ಪತ್ರೆ, ನುರಿತ ಸಿಬ್ಬಂದಿಯನ್ನು ನೀಡುವ ಮೂಲಕ ಜೆಎಸ್‍ಎಸ್ ಈ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿದೆ ಎಂದು ಸಚಿವ ಸುಧಾಕರ್  ಶ್ಲಾಘಿಸಿದರು.

ಗುಣಮಟ್ಟ ಹಾಗೂ ಕಡಿಮೆ ದರದ ಚಿಕಿತ್ಸೆ ನೀಡುವ ಗುರಿ ನಮ್ಮ ಸರ್ಕಾರಕ್ಕಿದೆ. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ, ರಾಜ್ಯದ 1.5 ಕೋಟಿ ಕುಟುಂಬಗಳಿಗೆ ಪ್ರಯೋಜನ ದೊರೆಯುತ್ತಿದೆ. ದೇಶದಲ್ಲಿ ಶೇ.60 ರಷ್ಟು ಜನರು ಆರೋಗ್ಯಕ್ಕಾಗಿ ಹೆಚ್ಚು ಖರ್ಚು ಮಾಡುತ್ತಾರೆ. ನಮ್ಮಲ್ಲಿ ಅನೇಕ ಆರೋಗ್ಯ ಸೇವೆ ಉಚಿತವಾಗಿದ್ದರೂ ಗುಣಮಟ್ಟ ಹೊಂದಬೇಕಿದೆ ಎಂದರು.

ಕಾಂಗ್ರೆಸ್‍ಗೆ ತಳಮಟ್ಟ ಗೊತ್ತಿಲ್ಲ

“ಕಾಂಗ್ರೆಸ್ ನವರಿಗೆ ತಳಮಟ್ಟದ ರಾಜಕಾರಣ ಅರ್ಥವಾಗಿರಲಿಲ್ಲ. ಹೀಗಾಗಿ ಕಾಂಗ್ರೆಸ್ ನಲ್ಲಿ ಎಲ್ಲರೂ ವಿಫಲರಾಗಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಅವರು 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಹಿಂದೆಯೇ ಹೇಳಿದ್ದೆ. ಅದರಂತೆಯೇ ಆಗಿದೆ” ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.

“ಬಿಜೆಪಿ ಪ್ರತಿ ಚುನಾವಣೆಯನ್ನೂ ಸವಾಲಾಗಿ ಸ್ವೀಕರಿಸುತ್ತದೆ. ಆದ್ದರಿಂದ ವಿಧಾನಪರಿಷತ್ ಹಾಗೂ ವಿಧಾನಸಭೆ ಕ್ಷೇತ್ರಗಳನ್ನು ಗೆದ್ದಿದ್ದೇವೆ. ಇದರಿಂದ ಪಕ್ಷ ಎಷ್ಟು ಬಲಿಷ್ಠವಾಗಿದೆ ಎಂದು ಗೊತ್ತಾಗಿದೆ” ಎಂದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು.

English summary….

Work in rural areas: Health Minister Dr.K.Sudhakar appeals to young doctors

Studying in abroad is good, but return and do service in India

Mysuru, November 11, 2020: Doctors should be willing to serve in rural areas as 70% of the population resides in Rural India says Health and Medical Education Minister Dr.K.Sudhakar. He was speaking in 11th convocation ceremony of JSS Higher education and research academy here in Mysuru on Wednesday.

Government has made it mandatory for the post graduate medical students to serve in rural areas after completion of their studies. 2500 medicos will be completing their graduation this year. Doctors should be responsible enough to serve in rural areas on humanitarian grounds.

Some doctors have appealed in the court against this policy. They should withdraw their appeal and serve voluntarily in rural areas. You are free to study abroad but, return back to mother land and serve here after the completion of studies. The Minister advised the medical grads.

There is one doctor for every 11-12 thousand people in the state. A bed is available for every thousand people. As per the WHO standards, there should be a doctor for every thousand people and 2.7 beds per thousand population. Prime Minister Narendra Modi Government has given approval to establish 150 medical colleges in last 6 years. Additional 17,000 seats have been added to post graduate courses. Health sector has been strengthened by all these measures. Explained Dr.Sudhakar.

Pandemic has been managed well in India. Global Mortality rate due to Covid is at 3.8%, but it is 1.4% in the country and 1.3% in the state. Earlier we have 19% positivity rate in some districts, but it is reduced to 2.2% now. Said the Minister.

JSS Institution has been the pride of Karnataka and has brought laurels to the state at global arena. JSS should grow on the lines of ancient Indian Universities like Nalanda and Takshashila. The war against Covid is still on. JSS has provided 1,800 bedded hospital and staff for this purpose and actively participated in this fight. Praised Dr.Sudhakar.

Sutturu seer Shri Shri Shivaratri Deshikendra Mahaswamiji was present during the event.

Other Points made by the Minister

• We are committed to provide quality health care at affordable prises. Around 1.5 Crore families in the state are benefitted from Ayushman Bharat-Arogya Karnataka scheme.

• 60% of the people in our country are incurring out-of-the-pocket expenditure on health care. We have free health care services but quality needs to be improved.

• New medical colleges will come up in Chikkaballapur, Haveri and Yadgir

Congress is disconnected from ground reality

Congress is disconneted from ground reality and its leaders doesn’t understand have their ears to the ground. That’s the reason they have failed miserably. I had told earlier that Muniratna is going to win RR Nagar with more than 50 thousand votes. Same thing happened. BJP takes up every single election as a challenge. That’s the reason we have won both seats in bypolls and all 4 MLC seats, which has further strengthened the party. Said Dr.Sudhakar.

Key words: Work – rural areas-Health Minister -Dr.K.Sudhakar -appeals – young doctors