ಮಹಿಳಾ ಟಿ-20 ಏಷ್ಯಾಕಪ್:  ಫೈನಲ್ ನಲ್ಲಿ ಶ್ರೀಲಂಕಾ ಬಗ್ಗು ಬಡಿದು ಪ್ರಶಸ್ತಿ ಮುಡಿಗೇರಿಸಿಕೊಂಡ ಟೀಂ ಇಂಡಿಯಾ.

ಬಾಂಗ್ಲಾದೇಶ,ಅಕ್ಟೋಬರ್,15,2022(www.justkannada.in): ಬಾಂಗ್ಲಾದೇಶದಲ್ಲಿ ನಡೆದ ಮಹಿಳಾ ಏಷ್ಯಾಕಪ್​ ಫೈನಲ್​  ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು  ಬಗ್ಗುಬಡಿದು ಟೀಂ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಬಾಂಗ್ಲಾದ ಸಿಲೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಚಾಮರಿ ಅಟಾಪಟು ಹಾಗೂ ಅನುಷ್ಕಾ ಸಂಜೀವನಿ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. 6 ರನ್ ಗಳಿಸಿದ್ದ ಅಟಾಪಟು 3ನೇ ಓವರ್​ನಲ್ಲೇ ರೇಣುಕಾ ಸಿಂಗ್ ಬೌಲಿಂಗ್​ನಲ್ಲಿ ರನೌಟ್ ಬಲೆಗೆ ಬಿದ್ದರು. ಅಂತಿಮವಾಗಿ ಶ್ರೀಲಂಕಾ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿತು.

ಗುರಿ ಬೆನ್ನತ್ತಿದ ಟೀಮ್ ಇಂಡಿಯಾ  8.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 71 ರನ್ ಬಾರಿಸುವ ಮೂಲಕ ಏಷ್ಯಾಕಪ್ ಮುಡಿಗೇರಿಸಿಕೊಂಡಿತು.

Key words:  Women’s -T-20 Asia Cup-Team India -won -final.