ಇನ್ಮುಂದೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಒರಿಜಿನಲ್ ಐಡಿ ಬೇಕಿಲ್ಲ.

ಬೆಂಗಳೂರು,ಜೂನ್,12,2023(www.justkannada.in):  ನಿನ್ನೆ ರಾಜ್ಯಾದ್ಯಂತ ಶಕ್ತಿಯೋಜನೆಗೆ ಚಾಲನೆ ಸಿಕ್ಕಿದ್ದು ಈ ಮೂಲಕ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಲಾಗಿದೆ.

ಮಹಿಳೆಯರು ಉಚಿತ ಪ್ರಯಾಣ ಬೆಳೆಸಲು ಒರಿಜಿನಲ್  ಐಡಿ ಕಾರ್ಡ್ ಹೊಂದಿರಬೇಕು ಎಂಬ ನಿಯಮವಿತ್ತು. ಆದರೆ ರಾಜ್ಯದ ಹಲವೆಡೆ ಐಡಿ ಪ್ರೂಫ್​ ವಿಚಾರಕ್ಕೆ ಕಂಡಕ್ಟರ್ ಹಾಗೂ ಮಹಿಳಾ ಪ್ರಯಾಣಿಕರ ನಡುವೆ ಗಲಾಟೆ, ಮಾತಿನ ಚಕಮಕಿಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ ನಕಲು ಪ್ರತಿ ತೋರಿಸಿ ಬಸ್‌ ಗಳಲ್ಲಿ ಉಚಿತ ಪ್ರಯಾಣಿಸಬಹುದು ಎಂದು ಹೇಳಿದೆ.

ಈ ಮೂಲಕ ಒರಿಜಿನಲ್​ ಐಡಿ ಬೇಕಾ? ಅಥವಾ ನಕಲು (ಝರಾಕ್ಸ್) ಪ್ರತಿ ಇದ್ದರೆ ಸಾಕಾ? ಎನ್ನುವ ಎಲ್ಲಾ ಗೊಂದಲಗಳಿಗೆ ಇದೀಗ ತೆರೆ ಎಳೆದಿದೆ.

ಈ ಕುರಿತು ಸಾರಿಗೆ ಇಲಾಖೆ ತಿದ್ದುಪಡಿ ಆದೇಶ ಹೊರಡಿಸಿದ್ದು, ಆಧಾರ್ ಕಾರ್ಡ್ ಹಾಗೂ ವೋಟರ್​ ಐಡಿಯ ಝರಾಕ್ಸ್​ ಇದ್ದರೂ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹಾರ್ಡ್ ಮತ್ತು ಸಾಫ್ಟ್ ಕಾಪಿ ಇದ್ದರೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

Key words: women -do not -need -original ID – free- bus travel.