Tuesday, August 4, 2026

BDA Apartments

Home Crime ಪೂಜೆ ಸಲ್ಲಿಸುವ ವೇಳೆ ಸೀರೆಗೆ ಬೆಂಕಿ ತಗುಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಸಾವು…

ಪೂಜೆ ಸಲ್ಲಿಸುವ ವೇಳೆ ಸೀರೆಗೆ ಬೆಂಕಿ ತಗುಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಸಾವು…

ಹುಬ್ಬಳ್ಳಿ,ಜೂ,25,2019(www.justkannada.in):  ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ವೇಳೆ ಸೀರೆಗೆ ಬೆಂಕಿ ತಗುಲಿ ತೀವ್ರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಆದರ್ಶ ನಗರದ ನಿವಾಸಿ ಛಾಯಾ ನಾಗರಾಜ್ ಮೃತಪಟ್ಟ ಮಹಿಳೆ. ಛಾಯ ನಾಗರಾಜ್ ಅವರು ಜೂನ್ 17 ರಂದು ವಿಶ್ವನಾಥ್ ದೇವಸ್ಥಾನದ ನಾಗರಕಟ್ಟೆಗೆ ಪೂಜೆ ಸಲ್ಲಿಸುವ ವೇಳೆ ಉರಿಯುತ್ತಿದ್ದ ಕರ್ಪೂರದ ಬೆಂಕಿ ಸೀರೆಗೆ  ತಗುಲಿ ಛಾಯ ಮಹದೇವ್ ಸುಮಾರು ಶೇ.60ರಷ್ಟು ಗಂಭೀರ ಗಾಯಗೊಂಡಿದ್ದರು. ಇವರನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ ಛಾಯ ನಾಗರಾಜ್ ಅವರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Woman -dies -fire – saris -while -worshiping…