ಸಂಜೆ 6 ಗಂಟೆಯೊಳಗೆ ವಿಶ್ವಾಸಮತಯಾಚನೆ ಮಾಡಿ- ರಾಜ್ಯಪಾಲರಿಂದ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಮತ್ತೊಮ್ಮೆ ಸೂಚನೆ…

ಬೆಂಗಳೂರು,ಜು,19,2019(www.justkannada.in):  1.30ಕ್ಕೆ ವಿಶ್ವಾಸ ಮತಯಾಚನೆ ಮಾಡುವಂತೆ ನೀಡಿದ್ದ ಡೆಡ್ ಲೈನ್ ಅನ್ನ ರಾಜ್ಯ ಸರ್ಕಾರ ಮೀರಿದ ಹಿನ್ನೆಲೆ ರಾಜ್ಯಪಾಲರು ಇದೀಗ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಮತ್ತೊಮ್ಮೆ  ನಿರ್ದೇಶನ ನೀಡಿದ್ದಾರೆ.

ಸಂಜೆ 6 ಗಂಟೆಯೊಳಗೆ ವಿಶ್ವಾಸಮತಯಾಚನೆ ಮಾಡಿ ಎಂದು ರಾಜ್ಯಪಾಲರು ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಮತ್ತೊಮ್ಮೆ ಡೆಡ್ ಲೈನ್ ನೀಡಿದ್ದಾರೆ. ಈ ಬಗ್ಗೆ  ರಾಜ್ಯಪಾಲರು ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ  ಮರು ಜ್ಞಾಪನಾ ಪತ್ರ ರವಾನಿಸಿದ್ದಾರೆ.

ಮಧ್ಯಾಹ್ನ 1.30ರೊಳಗೆ ವಿಶ್ವಾಸಮತಯಾಚಿಸುವಂತೆ ನಿನ್ನೆ ರಾಜ್ಯಪಾಲರು  ಸರ್ಕಾರಕ್ಕೆ ಸೂಚನೆ ನೀಡಿದ್ದರು. ಸರ್ಕಾರ ರಾಜ್ಯಪಾಲರ ಸೂಚನೆ ಪಾಲಿಸದ ಹಿನ್ನೆಲೆ ಇದೀಗ ಮತ್ತೊಮ್ಮೆ ನಿರ್ದೇಶನ ನೀಡಿದ್ದಾರೆ.

Key words: within- 6pm-vote of confidence-CM HD Kumaraswamy –again- instructed – Governor.