Sunday, August 9, 2026

BDA Apartments

Home Crime ಮೈಸೂರಿನಲ್ಲಿ ಪ್ರೇಮವೈಫಲ್ಯದಿಂದ ಮನನೊಂದು ಯುವಕ ಆತ್ಮಹತ್ಯೆ

ಮೈಸೂರಿನಲ್ಲಿ ಪ್ರೇಮವೈಫಲ್ಯದಿಂದ ಮನನೊಂದು ಯುವಕ ಆತ್ಮಹತ್ಯೆ

ಮೈಸೂರು,ನವೆಂಬರ್,14,2020(www.justkannada.in) : ತನ್ನ ಪ್ರೀತಿಯ ವೈಫಲ್ಯ, ತಂಗಿಯ ಮದುವೆ ರದ್ದಾದ ಘಟನೆಯಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ವಿಜಯಶ್ರೀಪುರದಲ್ಲಿ ನಡೆದಿದೆ.kannada-journalist-media-fourth-estate-under-loss

ಚೇತನ್ ಶರ್ಮಾ(29) ಮೃತ ದುರ್ದೈವಿ. ಬೆಂಗಳೂರಿನ ಚೇತನ್ ಶರ್ಮ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದರು. ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ ಮಾಡಿದ್ದ ಚೇತನ್ ಶರ್ಮ ಹತ್ತು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಆದರೆ, ಇವರಿಬ್ಬರ ಪ್ರೇಮ ಕಾರಣಾಂತರಗಳಿಂದ ಮುರಿದುಬಿದ್ದಿತ್ತು. ಹೀಗಾಗಿ, ಚೇತನ್ ಶರ್ಮ ಮಾನಸಿಕ ಖಿನ್ನತೆಗೆ ಒಳಗಾಗಿದ್ದ.

ಅಲ್ಲದೆ ಇತ್ತೀಚೆಗಷ್ಟೆ ಫಿಕ್ಸ್ ಆಗಿದ್ದ ತಂಗಿಯ ಮದುವೆ ಕ್ಯಾನ್ಸಲ್ ಆಗಿತ್ತು. ಈ ಎಲ್ಲಾ ಬೆಳಣಿಗೆಗಳಿಂದ ಮನನೊಂದಿದ್ದ ಚೇತನ್ ಶರ್ಮ ಮಾನಸಿಕ ಖಿನ್ನತೆಗೆ ಒಳಗಾಗಿ ಮೈಸೂರಿನ ವಿಜಯಶ್ರೀಪುರದಲ್ಲಿರುವ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

With-love-failure-Mysore-young-man

key words : With-love-failure-Mysore-young-man