ಈ ಬಾರಿ ಬೆಳಗಾವಿಯ ಸುವರ್ಣಸೌಧದಲ್ಲೇ ಚಳಿಗಾಲದ ಅಧಿವೇಶನ- ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ.

ಹುಬ್ಬಳ್ಳಿ,ಅಕ್ಟೋಬರ್,6,2021(www.justkannada.in): ಈ ಬಾರಿ ಬೆಳಗಾವಿಯ ಸುವರ್ಣಸೌಧದಲ್ಲೇ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ,  ಡಿಸೆಂಬರ್ 2ನೇ ವಾರದಲ್ಲಿ ಅಧಿವೇಶನ ನಡೆಯುವ ಸಾಧ್ಯತೆಯಿದ್ದು ಈ ಕುರಿತು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆಗೆ ಚರ್ಚಿಸಿದ್ದೇನೆ. 3 ವರ್ಷಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆದಿಲ್ಲ. ಹಿಗಾಗಿ ಈ ಬಾರಿ 2 ವಾರಗಳ ಕಾಲ ಬೆಳಗಾವಿಯಲ್ಲಿ ಅಧಿವೇಶನ ನಡೆಸಲಿದ್ದೇವೆ ಎಂದು  ತಿಳಿಸಿದರು. SSLC examination -should not be- cancel-Basavaraja horatti

ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲೆ ಬೆಳಗಾವಿ ಅಧಿವೇಶನ ಹೆಚ್ಚು ಕೇಂದ್ರೀಕರಿಸಲಿದೆ. ಅಧಿವೇಶನದಲ್ಲಿ ಯಾವುದೇ ಕಾರಣಕ್ಕೂ ಗಲಾಟೆಗಳು ಆಗದಂತೆ ನೋಡಿಕೊಳ್ಳಲಿದೆ. ಉತ್ತರ ಕರ್ನಾಟಕದ ಬಗ್ಗೆ ಹೆಚ್ಚು ಚರ್ಚೆ ನಡೆಯಲಿದೆ. ಕಲಾಪ ಸುಸೂತ್ರವಾಗಿ ನಡೆಯಲು ವಿರೋಧ ಪಕ್ಷದ ನಾಯಕರ ಜತೆಯೂ ಮಾತನಾಡಲಿದ್ದೇವೆ ಎಂದು  ಬಸವರಾಜ ಹೊರಟ್ಟಿ ನುಡಿದರು.

Key words: winter session –belgavi-suvarnasoudha- legislative council- Basavaraja  horatti