Saturday, September 12, 2026

BDA Apartments

ಬಂದೂಕು ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದೇಕೆ ಸಲ್ಮಾನ್ ಖಾನ್ BDA JK_Adv BDA Adv
Home Cinema ಬಂದೂಕು ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದೇಕೆ ಸಲ್ಮಾನ್ ಖಾನ್

ಬಂದೂಕು ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದೇಕೆ ಸಲ್ಮಾನ್ ಖಾನ್

ಬೆಂಗಳೂರು, ಜುಲೈ 23, 2022 (www.justkannada.in): ಬಾಲಿವುಡ್ ನಟ ಸಲ್ಮಾನ್ ಖಾನ್ ಬಂದೂಕು ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಬಂದೂಕು ಪರವಾನಗಿ ನೀಡುವಂತೆ ಮುಂಬೈ ಪೊಲೀಸ್ ಕಮಿಷನರ್ ಗೆ ಸಲ್ಮಾನ್ ಖಾನ್ ಮನವಿ ಸಲ್ಲಿಸಿದ್ದಾರೆ.

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹಂತಕರಾದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ​ ನಿಂದ ಹತ್ಯೆ ಬೆದರಿಕೆ ಪತ್ರ ಬಂದಿದೆ . ಹೀಗಾಗಿ ತಮಗೆ ಬಂದೂಕು ಹೊಂದಲು ಪರವಾನಗಿ ನೀಡಬೇಕು ಎಂದು ಕೋರಿದ್ದಾರೆ .

ಇದಕ್ಕೂ ಮುನ್ನ ಸಲ್ಮಾನ್​ ನಿವಾಸಕ್ಕೆ ಪೊಲೀಸ್​ ಭದ್ರತೆ ನೀಡಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಸಲ್ಮಾನ್​ ಬಂದೂಕು ಹೊಂದಲು ಪೊಲೀಸ್​ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.