ಫೈಜರ್ ಲಸಿಕೆ ತುರ್ತು ಬಳಕೆಗೆ WHO ಅನುಮತಿ…

ಜಿನಿವಾ,ಜನವರಿ,1,2021(www.justkannada.in):  ಫೈಜರ್- ಬಯೋಟೆಕ್  ಕೋವಿಡ್ ಲಸಿಕೆಗೆ ತುರ್ತು ಬಳಕೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದೆ. ಫೈಜರ್ ಲಸಿಕೆ ಈಗಾಗಲೇ ಇಂಗ್ಲೆಂಡ್, ಅಮೆರಿಕ, ಕೆನಡಾ, ಯುರೋಪ್ ನ ಕೆಲವು ದೇಶಗಳಲ್ಲಿ ತುರ್ತು ಬಳಕೆಗೆ ಅನುಮತಿ ನೀಡಲಾಗಿದ್ದು, ಬಳಸಲಾಗುತ್ತಿದೆ.jk-logo-justkannada-mysore

ಜಗತ್ತಿನಾದ್ಯಂತ ತುರ್ತು ಅವಶ್ಯಕತೆ ಹೆಚ್ಚಿರುವ ಹಿನ್ನೆಲೆಯಲ್ಲಿ   ಸಭೆಯಲ್ಲಿ ಫಿಜರ್-ಬಯೊಟೆಕ್ ಲಸಿಕೆಯನ್ನು ತುರ್ತು ಬಳಕೆಗೆ ಬಳಸಬಹುದು ಎಂದು ತೀರ್ಮಾನ ಕೈಗೊಂಡಿದೆ. ಕಳೆದ ವರ್ಷ ಚೀನಾದಲ್ಲಿ ಕೊರೋನವೈರಸ್ ಮೊದಲ ಬಾರಿಗೆ ಕಾಣಿಸಿಕೊಂಡು ವ್ಯಾಪಕವಾಗಿ ಹಬ್ಬಿದ ನಂತರ ಅದರ ವಿರುದ್ಧ ಹೋರಾಡಲು ಫೈಜರ್  ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಮೊದಲ ಬಾರಿಗೆ ಅನುಮತಿ ನೀಡುತ್ತಿದೆ.who-green-signal-emergency-use-pfizer-vaccine

ಯುಎಸ್-ಜರ್ಮನ್ ಲಸಿಕೆಯೊಂದಿಗೆ ಕಳೆದ ಡಿಸೆಂಬರ್ 8 ರಂದು ಬ್ರಿಟನ್  ರೋಗಾಣು ವಿರುದ್ಧ ಹೋರಾಡುವ ಲಸಿಕೆಯನ್ನು ಪ್ರಾರಂಭಿಸಿತು, ಅಮೆರಿಕ, ಕೆನಡಾ ಮತ್ತು ಐರೋಪ್ಯ ಒಕ್ಕೂಟ ದೇಶಗಳು ಇದನ್ನು ಅನುಸರಿಸುತ್ತವೆ.

Key words: WHO green signal- emergency- use – Pfizer vaccine.