Tuesday, August 4, 2026

BDA Apartments

Home Front Page ವೀಕೆಂಡ್ ಕರ್ಫ್ಯೂ ದಿನ: ಮಾಜಿ ಸಿಎಂ ಸಿದ್ಧರಾಮಯ್ಯ ಅಭಿಮಾನಿಗಳು ಮೈಸೂರಿನಲ್ಲಿ ಮಾಡಿದ್ದೇನು ಗೊತ್ತಾ..?

ವೀಕೆಂಡ್ ಕರ್ಫ್ಯೂ ದಿನ: ಮಾಜಿ ಸಿಎಂ ಸಿದ್ಧರಾಮಯ್ಯ ಅಭಿಮಾನಿಗಳು ಮೈಸೂರಿನಲ್ಲಿ ಮಾಡಿದ್ದೇನು ಗೊತ್ತಾ..?

ಬೆಂಗಳೂರು,ಏಪ್ರಿಲ್,24,2021(www.justkannada.in):   ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದ್ದು ಇಂದಿರಾ ಕ್ಯಾಂಟಿನ್ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಅಭಿಮಾನಿಗಳು ಜನರಿಗೆ ಊಟ ಮತ್ತು ಮಾಸ್ಕ್ ಹಂಚಿಕೆ ಮಾಡಿದರು. jk

ನಗರದ ಕೆ. ಆರ್ ಆಸ್ಪತ್ರೆಯ ಇಂದಿರಾ ಕ್ಯಾಂಟಿನ್ ಬಳಿ  ನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ  ಜನರಿಗೆ ಊಟ, ಮಾಸ್ಕ್ ಹಂಚಿಕೆ ಮಾಡಲಾಯಿತು. ಈ ವೇಳೆ ಮಾತನಾಡಿದ ಪಾಲಿಕೆ ಸದಸ್ಯ ಲೋಕೇಶ್ ಪಿಯಾ, ಇಂದಿರಾ ಕ್ಯಾಟಿಂನ್ ಬಂದ್ ಮಾಡಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಇಂದಿರಾ ಕ್ಯಾಂಟಿನ್ ಬಳಿ ಹಸಿದವರಿಗೆ ಅನ್ನ ನೀಡಿ ಎನ್ನುವ ಕರೆ ನೀಡಿದ್ದರು.  ಹೀಗಾಗಿ ನಾವು ಇವತ್ತು ಊಟ  ನೀಡುತ್ತಿದ್ದೇವೆ ಎಂದರು.weekend-curfew-lunch-mask-distribute-former-cm-siddaramaiah-fans-mysore

ಹಾಗೆಯೇ ಸಿದ್ದರಾಮಯ್ಯ ಬಡವರ‌ಪರ ಇದ್ದಾರೆ, ಬಡವರ ಮೇಲೆ ಅವರಿಗಿರುವ ಕಾಳಜಿ ಇದು. ಹಾಗಾಗಿ ನಾವು ಇಂದು ಇಂದಿರಾ ಕ್ಯಾಂಟೀನ್ ಬಳಿ ಊಟ ಹಂಚುತ್ತಿದ್ದೇವೆ ಎಂದು ಲೋಕೇಶ್ ಪಿಯಾ ತಿಳಿಸಿದರು.

Key words: Weekend curfew-Lunch-mask –distribute- former CM -Siddaramaiah –fans-mysore