Sunday, September 27, 2026

BDA Apartments

ವಿಕೆಂಡ್ ಕರ್ಫ್ಯೂನಲ್ಲೂ ಇರುತ್ತೆ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಸಂಚಾರ BDA J...
Home Front Page ವಿಕೆಂಡ್ ಕರ್ಫ್ಯೂನಲ್ಲೂ ಇರುತ್ತೆ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಸಂಚಾರ.

ವಿಕೆಂಡ್ ಕರ್ಫ್ಯೂನಲ್ಲೂ ಇರುತ್ತೆ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಸಂಚಾರ.

ಬೆಂಗಳೂರು,ಜೂನ್,25,2021(www.justkannada.in): ರಾಜ್ಯದಲ್ಲಿ ಕೊರೋನಾ ಇಳಿಕೆಯಾದ ಹಿನ್ನೆಲೆ ಅನ್ ಲಾಕ್ ಮಾಡಲಾಗಿದ್ದು ವಿಕೇಂಡ್ ಕರ್ಫ್ಯೂ ಜಾರಿಯಲ್ಲಿದೆ, ಈ ಮಧ್ಯೆ ವಿಕೆಂಡ್ ಕರ್ಫ್ಯೂನಲ್ಲಿ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ.jk

ಕಳೆದ ಬಾರಿ ವಿಕೆಂಡ್ ಕರ್ಫ್ಯೂನಲ್ಲಿ ಬಸ್ ಸಂಚಾರಕ್ಕೆ ಅವಕಾಶ ಇರಲಿಲ್ಲ. ಈ ಸಂಬಂಧ ಮಾತನಾಡಿರುವ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಪಕ ರಾಜೇಶ್‌, ಜನರ ಅನುಕೂಲಕ್ಕಾಗಿ ವಿಕೇಂಡ್‌ ಕರ್ಫ್ಯೂನಲ್ಲೂ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟ ನಡೆಸಲಿವೆ ಎಂದಿದ್ದಾರೆ.

‘ಜನರ ಅನುಕೂಲಕ್ಕಾಗಿ ನಾಳೆಯಿಂದಲೇ ಬಸ್‌ಗಳು ಸಂಚಾರಿಸಲಿವೆ. ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಬಸ್‌ಗಳು ಓಡಾಡಲಿವೆ. ಇನ್ನು ವೀಕೆಂಡ್‌ ಕರ್ಫ್ಯೂನಲ್ಲಿ ಪ್ರಯಾಣಿಕರ ಓಡಾಟ ಕಡಿಮೆ ಇರುತ್ತೆ. ಹೀಗಾಗಿ ನಾಳೆ 1200 ಬಿಎಂಟಿಸಿ ಬಸ್‌ ರಸ್ತೆಗಳಿಸಲು ತೀರ್ಮಾನಿಲಾಗಿದೆ’ ರಾಜೇಶ್‌ ಮಾಹಿತಿ ನೀಡಿದ್ದಾರೆ.

Key words: weekend curfew- KSRTC- BMTC- Bus -Traffic.