ಖಾತೆಗಿಂತ ಕೆಲಸ ಮಾಡುವುದು ಮುಖ್ಯ: ಜನರಿಗೆ ಕೊಟ್ಟ ಭರವಸೆ ಪೂರೈಸುತ್ತೇವೆ-ಸಚಿವ ಕೆ.ಎಚ್ ಮುನಿಯಪ್ಪ.

ಬೆಂಗಳೂರು,ಮೇ,29,2023(www.justkannada.in): ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಿ ಖಾತೆ ಹಂಚಿಕೆಯಾದ ಬೆನ್ನಲ್ಲೆ  ಕೆಲವರಿಗೆ ಅಸಮಾಧಾನವಿರುವ ಮಾತು ಕೇಳಿ ಬಂದಿತ್ತು. ಆದರೆ ಈ ಮಾತನ್ನ ಸಚಿವ ಕೆಎಚ್ ಮುನಿಯಪ್ಪ ತಳ್ಳಿ ಹಾಕಿದ್ದಾರೆ.

ಈ ಕುರಿತು ನವದೆಹಲಿಯಲ್ಲಿ ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, ಯಾವುದೇ ಖಾತೆಯಾದರೂ ನಿಭಾಯಿಸುತ್ತೇವೆ. ಯಾವುದೇ ಖಾತೆ ಮುಖ್ಯ ಅಲ್ಲ. ಕೆಲಸ ಮಾಡುವುದು ಮುಖ್ಯ ರಾಜ್ಯದ ಜನರ ಆಶೋತ್ತರ ಈಡೇರಿಸುವುದು ಮುಖ್ಯ ಎಂದರು.

ಜನರಿಗೆ ಕೊಟ್ಟಿರುವ ಗ್ಯಾರಂಟಿಗಳನ್ನ ಪೂರೈಸುತ್ತೇವೆ. ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಕೊಡೋದು ಖಚಿತ.   ಅನ್ನಭಾಗ್ಯ ಯಾವ ರೀತಿ ಹಂಚಿಕೆ ಮಾಡಬೇಕೆಂಬ ಬಗ್ಗೆ ಚರ್ಚೆ ಮಾಡಲಾಗುತ್ತದೆ.  ಮುಂದಿನ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಎಂದರು.

Key words: We- will- fulfill -our promises – people-Minister -KH Muniappa.