ನಾವು ಮಹಿಷಾ ದಸರಾ ಆಚರಣೆ ಮಾಡೇ ಮಾಡುತ್ತೇವೆ- ಮಾಜಿ ಮೇಯರ್ ಪುರುಷೋತ್ತಮ್.

ಮೈಸೂರು,ಅಕ್ಟೋಬರ್,11,2023(www.justkannada.in): ಅಕ್ಟೋಬರ್ 13 ರಂದು ಮಹಿಷಾ ದಸರಾ ಆಚರಣೆಗೆ ಮತ್ತು ಚಾಮುಂಡಿ ಬೆಟ್ಟ ಚಲೋ ನಡೆಸಲು ಮೈಸೂರು ಪೊಲೀಸರು ಅನುಮತಿ ನಿರಾಕರಿಸಿದ್ದು ಈ ಮಧ್ಯೆ ನಾವು ಮಹಿಷಾ ದಸರಾ ಆಚರಣೆ ಮಾಡೇ ಮಾಡುತ್ತೇವೆ ಎಂದು ಮಾಜಿ ಮೇಯರ್ ಹಾಗೂ ಮಹಿಷಾ ದಸರಾ ಆಚರಣ ಸಮಿತಿ ಅಧ್ಯಕ್ಷ ಪುರುಷೋತ್ತಮ್  ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಪುರುಷೋತ್ತಮ್ ,  ‘ಪೊಲೀಸರು ನಮ್ಮನ್ನು ಕರೆದು ಮಾತನಾಡಬೇಕಿತ್ತು. ಇದೀಗ ಏಕಾಏಕಿ ಅನುಮತಿ ನಿರಾಕರಿಸಿದ್ದೇವೆ. ನಮಗೆ 10 ಜನರಿಗಾದರೂ  ಮಹಿಷನಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ಕೊಡಲಿ. ನಾವು ಹಿಂದೆ ಮಹಿಷಾ ದಸರಾ ಮಾಡಿದಾಗ ಎಂದಾದರೂ ಗಲಾಟೆಯಾಗಿತ್ತಾ?. ಲಕ್ಷಾಂತರ ಜನ ಸೇರಿಸಿ ರಾಜಕೀಯ ಸಮಾವೇಶ ಮಾಡಿದಾಗ ಅದಕ್ಕೆ ಪೊಲೀಸ್ ಬಂದೋ ಬಸ್ತ್ ಕೊಡುತ್ತೀರಿ. ಈಗಲೂ ಅದೇ ರೀತಿ ನಮಗೂ ರಕ್ಷಣೆ ಕೊಡಿ‌. ಸರ್ಕಾರ ಮಹಿಷಾ ದಸಾರ ಮಾಡಬಾರದು ಎಂದು ಹೇಳಿಲ್ಲ ಎಂದು ತಿಳಿಸಿದರು.

ಮಹಿಷಾ ದಸರಾ ಆಚರಣೆ ಸಮಿತಿ ಈಗಾಗಲೇ ತೀರ್ಮಾನ ಮಾಡಿದೆ. ಅದರಂತೆ ನಾವು ಮಹಿಷಾ ದಸರಾ ಆಚರಣೆ ಮಾಡುತ್ತೇವೆ. ಅದನ್ನು ಎಲ್ಲಿ ಹೇಗೆ ಎಂಬುದನ್ನು ತಿಳಿಸುತ್ತೇವೆ ಎಂದು ಮಹಿಷಾ ಪುರುಷೋತ್ತಮ್ ಹೇಳಿದರು.

Key words: We will –celebrate- Mahisha Dasara – Former Mayor -Purushottam.