Tuesday, October 6, 2026

BDA Apartments

immense respect BDA JK_Adv BDA Adv
Home Front Page “ನಾವು ಈಗ ಬಾಂಬೆ ಟೀಂ ಅಲ್ಲ, ಎಲ್ಲಾ ಬಿಜೆಪಿ ಟೀಂ” : ಸಚಿವ ಆರ್.ಶಂಕರ್

“ನಾವು ಈಗ ಬಾಂಬೆ ಟೀಂ ಅಲ್ಲ, ಎಲ್ಲಾ ಬಿಜೆಪಿ ಟೀಂ” : ಸಚಿವ ಆರ್.ಶಂಕರ್

ಮೈಸೂರು,ಜನವರಿ,14,2021(www.justkannada.in) : ನಾವು ಈಗ ಬಾಂಬೆ ಟೀಂ ಅಲ್ಲ, ಎಲ್ಲಾ ಬಿಜೆಪಿ ಟೀಂ. 17 ಮಂದಿ ಶಾಸಕರು ಅಗತ್ಯಬಿದ್ರೆ ಮತ್ತೊಮ್ಮೆ ಸಭೆ ಸೇರಲಿದ್ದೇವೆ. ಆಗಂತ ಅದು ಪಕ್ಷ ವಿರೋಧಿ ಚಟುವಟಿಕೆಯಲ್ಲ‌ ಎಂದು ಸಚಿವ ಆರ್.ಶಂಕರ್ ಹೇಳಿದ್ದಾರೆ.jk-logo-justkannada-mysoreಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ದಿನಗಳಲ್ಲಿ ನಮ್ಮ ಗುರು ಎಚ್.ವಿಶ್ವನಾಥ್, ಮುನಿರತ್ನಗೆ‌ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ. ಪಕ್ಷದ ಚೌಕಟ್ಟಿನಲ್ಲಿದ್ದಾಗ ಇತಿಮಿತಿಯೊಳಗೆ ಇರಬೇಕಾಗುತ್ತೆ. ನನಗೆ ಯಾವುದೇ ಖಾತೆ ನೀಡಿದ್ರೂ ಶಕ್ತಿ ಮೀರಿ ಕೆಲಸ ಮಾಡ್ತೀನಿ ಎಂದರು.

ಸಚಿವ ನಾಗೇಶ್‌ಗೆ ಸಂಪುಟ ದರ್ಜೆ ಸ್ಥಾನ ಮಾನ ನೀಡಿರುವುದು ಸ್ವಲ್ಪ ಸಮಾಧಾನ ತಂದಿದೆ‌. ಉಳಿದ ಇಬ್ಬರಿಗೆ ಸಿಎಂ ಕೈ ಹಿಡಿಯುವ ವಿಶ್ವಾಸವಿದೆ ಎಂದು ಹೇಳಿದರು.

“ಅಳದಿದ್ರೆ ತಾಯಿ ಕೂಡ ಮಗುವಿಗೆ ಹಾಲು ನೀಡಲ್ಲ”

ಕುರುಬರ ಎಸ್‌ಟಿ ಮೀಸಲಾತಿ ಹೋರಾಟ ವಿಚಾರ ಮಾತನಾಡಿದ ಅವರು, ಅಳದೆ ಇದ್ರೆ ತಾಯಿ ಕೂಡ ಮಗುವಿಗೆ ಹಾಲು ನೀಡಲ್ಲ. ಹಾಗಾಗಿ, ಈ ಕುರಿತು ಸರ್ಕಾರದ ಗಮನ ಸೆಳೆಯಬೇಕು. ಇದು ಯಾರ ವಿರುದ್ದವೂ  ಹೋರಾಟವಲ್ಲ. ಈಶ್ವರಪ್ಪ ಹೋರಾಟದ ನೇತೃತ್ವ ವಹಿಸಿದ್ದಾರೆ. ನಾನು ಕುರುಬ ಸಮಾಜದ ಸಾಮಾನ್ಯ ವ್ಯಕ್ತಿಯಾಗಿ ಪಾಲ್ಗೊಳ್ಳುತ್ತೇನೆ ಎಂದರು.

“ನಾಲ್ಕು ಜನ ಮಿನಿಸ್ಟರ್ ಇದ್ದೀವಿ. ಕ್ಯಾಬಿನೆಟ್‌ನಲ್ಲಿ ಈ ವಿಚಾರ ಪ್ರಸ್ತಾಪ ಮಾಡ್ತೀವಿ”We-not-Bombay-team-now-BJP Team-Minister-R. Shankar

ಮೊದಲು ರಾಜ್ಯ ಸರ್ಕಾರ ನಿಲುವು ಸ್ಪಷ್ಟ ಪಡಿಸಲಿ ಎಂಬ ಸಿದ್ದರಾಮಯ್ಯ ಸವಾಲಿಗೆ ಪ್ರತಿಕ್ರಿಯಿಸಿ, ಈಗ ನಾವು ಕುರುಬ ಸಮುದಾಯದ ನಾಲ್ಕು ಜನ ಮಿನಿಸ್ಟರ್ ಇದ್ದೀವಿ. ಕ್ಯಾಬಿನೆಟ್‌ನಲ್ಲಿ ಈ ವಿಚಾರವನ್ನ ಪ್ರಸ್ತಾಪ ಮಾಡೆ ಮಾಡ್ತೀವಿ ಎಂದು ತಿಳಿಸಿದರು.

key words : We-not-Bombay-team-now-BJP Team-Minister-R. Shankar