Sunday, August 2, 2026

BDA Apartments

Home Front Page ಕಾಂಗ್ರೆಸ್ ನಿಂದ ನಮಗೆ ಲಾಭವಿಲ್ಲ- ‘ಕೈ’ ಮುಖಂಡರು ಮತ್ತು ಸಿನಿಮಾ ಸ್ಟಾರ್ ಗಳ ವಿರುದ್ದ ಜೆಡಿಎಸ್...

ಕಾಂಗ್ರೆಸ್ ನಿಂದ ನಮಗೆ ಲಾಭವಿಲ್ಲ- ‘ಕೈ’ ಮುಖಂಡರು ಮತ್ತು ಸಿನಿಮಾ ಸ್ಟಾರ್ ಗಳ ವಿರುದ್ದ ಜೆಡಿಎಸ್ ಶಾಸಕ ಕಿಡಿ…

ಮಂಡ್ಯ,ಮೇ,11,2019(www.justkannada.in): ಹೊಂದಾಣಿಕೆ ಅಗತ್ಯವಿರಲಿಲ್ಲ. ನಮಗೆ ಕಾಂಗ್ರೆಸ್ ನಿಂದ ಲಾಭಕ್ಕಿಂತ ನಷ್ಟವೇ ಆಗಿದೆ ಎಂದು ಕೆ.ಆರ್ ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಅಸಮಾಧಾನ ಹೊರ ಹಾಕಿದರು.

ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್  ಕೆಲ ಕೈ ನಾಯಕರಿಂದ ಪ್ರಚಾರ ವಿಚಾರ ಕುರಿತು ಮಾತನಾಡಿದ ಶಾಸಕ ನಾರಾಯಣಗೌಡ, ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರು ಜೆಡಿಎಸ್ ಪರ ಪ್ರಚಾರ ಮಾಡಿಲ್ಲ.  ಸುಮಲತಾ ಪರ ಪ್ರಚಾರ ಮಾಡಿ ಅಂತಾ ಚಲುವರಾಯಸ್ವಾಮಿ ಹೇಳಿಲ್ಲ. ಆದರೆ ಚಲುವರಾಯಸ್ವಾಮಿಗೆ ಬೇರೆ ಯಾರೋ ನಿರ್ದೇಶಿಸಿದ್ದಾರೆ. ಸಿಎಂ ಕುರ್ಚಿ ಅಲುಗಾಡಿಸಲು ಪ್ಲಾನ್ ಮಾಡಿದ್ದಾರೆ. ನಿರ್ದೇಶಿಸಿರುವವರು ಯಾರು ಅಂತಾ ಮೇ 23ರ ನಂತರ ತಿಳಿಯಲಿದೆ ಎಂದರು.

ಕೆ.ಬಿ ಚಂದ್ರಶೇಖರ್ ಬಹಿರಂಗವಾಗಿಯೇ ಸುಮಲತಾ ಪರ ಪ್ರಚಾರ ಮಾಡಿದ್ದಾರೆ.  ಕೆ.ಆರ್ ಪೇಟೆಯಲ್ಲಿ ಮೈತ್ರಿ ಧರ್ಮ ಪಾಲನೆಯಾಗಿಲ್ಲ. ಹೀಗಾಗಿ ಚಂದ್ರ ಶೇಖರ್ ಜತೆ ಹೊಂದಾಣಿಕೆ ಸಾಧ್ಯವಿಲ್ಲ.  ಚಂದ್ರ ಶೇಖರ್ ಮನೆಗೆ ನಮ್ಮ ಹಿರಿಯರು ಹೋಗಿ ಮಾತನಾಡಿದ್ದರು. ಹಿರಿಯರಿಗೆ ಚಂದ್ರ ಶೇಖರ್ ಗೌರವ ಕೊಡಬೇಕಿತ್ತು ಎಂದು ನಾರಾಯಣಗೌಡ ಕಿಡಿಕಾರಿದರು.

ಸಿನಿಮಾ ಸ್ಟಾರ್ ಗಳ ವಿರುದ್ದ ಗರಂ..

ಇನ್ನು ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿದ ಸಿನಿಮಾ ನಟರ ವಿರುದ್ದ ಹರಿಹಾಯ್ದ ಶಾಸಕ ನಾರಾಯಣಗೌಡ, ಸಿನಿಮಾ ಸ್ಟಾರ್ ಗಳು ಬಂದ್ರು ಗಾಳಿಪಟದಂತೆ ಇದ್ದು ಹೋದ್ರು. ಅಂದು ಭಾಷಣ ಬಿಗಿದ ನಟರು ಈಗ ಎಲ್ಲಿದ್ದಾರೆ. ರೈತರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರಾ..? ಯಾರಿಗಾದ್ರೂ ಒಂದು ಬೋರ್ ವೆಲ್ ಕೊರೆಸಿದ್ದಾರಾ..?  ಅವರು ಹಾಗೆಯೇ ಬಂದ್ರು ಹಾಗೆಯೇ ಹೊರಟು ಹೋದ್ರು ಎಂದು ಲೇವಡಿ ಮಾಡಿದರು.

Key words: We -do not -benefit – Congress- JDS MLA -against -cinema stars