Friday, August 21, 2026

BDA Apartments

Home Front Page ಜಲಾಶಯಗಳಿಂದ ಒಂದು ಹನಿ ನೀರು ಬಿಟ್ರು ನೋಟಿಸ್ ಬರುತ್ತೆ: ಎಚ್.ಡಿ.ರೇವಣ್ಣ

ಜಲಾಶಯಗಳಿಂದ ಒಂದು ಹನಿ ನೀರು ಬಿಟ್ರು ನೋಟಿಸ್ ಬರುತ್ತೆ: ಎಚ್.ಡಿ.ರೇವಣ್ಣ

ಬೆಂಗಳೂರು, ಜೂನ್ 29, 2019(www.justkannada.in): ನೀರಾವರಿ ಇಲಾಖೆ ಕಾರ್ಯದರ್ಶಿಗೂ ಗೊತ್ತಾಗದೆ ನಮ್ಮ ಡ್ಯಾಂಗಳಿಗೆ ತಮಿಳುನಾಡು ಅಧಿಕಾರಿಗಳು ಬಂದು ಹೋಗಿದ್ದಾರೆ. ಎಲ್ಲ ಡ್ಯಾಂ‌ಗಳ ಲೆಕ್ಕ ಬರೆದಿಕೊಂಡು ಹೋಗಿದ್ದಾರೆ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

ಮೈಸೂರಿನ ಜಲದರ್ಶಿನಿಯಲ್ಲಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರೇವಣ್ಣ ಅವರು, ಅಣೆಕಟ್ಟೆಗಳಿಂದ ಒಂದು ಹನಿ ನೀರು ಹೊರಗೆ ಹೋದ್ರು ಎಲ್ಲರಿಗೂ ನೋಟಿಸ್ ಬರುತ್ತದೆ.

ನಾನು ಸಹ ಹೇಮಾವತಿ ಜಲಾಶಯಕ್ಕೆ ಭೇಟಿ ಕೊಟ್ಟಿದ್ದೇನೆ. ಅಲ್ಲಿಯೂ 15ದಿನಕ್ಕೆ ಆಗುವಷ್ಟು ನೀರಿದೆ ಅಷ್ಟೇ. ನಮ್ಮ ಡ್ಯಾಂಗಳಲ್ಲಿ ನೀರಿಲ್ಲ. ಮೊನ್ನೆ ಜಲಾಶಯಗಳಿಗೆ ಭೇಟಿ ಕೊಟ್ಟಿದ್ದು ಕೇಂದ್ರ ತಂಡ ಅಲ್ಲ ಅವರು ತಮಿಳುನಾಡಿನ ಅಧಿಕಾರಿಗಳು ಎಂದು ಮಾಹಿತಿ ನೀಡಿದ್ದಾರೆ.