ಮಾ.7ರೊಳಗೆ ವಾಟರ್ ಟ್ಯಾಂಕರ್ ನೋಂದಣಿ ಕಡ್ಡಾಯ: ಬಿಬಿಎಂಪಿ ಸೂಚನೆ

.
ಬೆಂಗಳೂರು, ಫೆಬ್ರವರಿ 28,2024(www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು ಈ ಮಧ್ಯೆ ವಾಟರ್ ಟ್ಯಾಂಕರ್ ಮಾಫಿಯಾ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.

ಮಾರ್ಚ್ 7ರೊಳಗೆ ವಾಟರ್ ಟ್ಯಾಂಕರ್ ನೋಂದಣಿ ಕಡ್ಡಾಯ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ. ಇಂದು ಬಿಬಿಎಂಪಿ ಹಾಗೂ ಜಲಮಂಡಳಿ ವತಿಯಿಂದ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತುಷಾರ್ ಗಿರಿನಾಥ್, ಟ್ರೇಡ್ ಲೈಸೆನ್ಸ್ ಇರುವ ಟ್ಯಾಂಕರ್ 54 ಇರಬಹುದು. ಸಾರಿಗೆ ಇಲಾಖೆ ಪ್ರಕಾರ 3500 ಟ್ಯಾಂಕರ್ ಗಳು ಇವೆ. ನಾವು ಅವರಿಗೆ ಒಂದು ವಾರ ಅವಕಾಶ ನೀಡುತ್ತೇವೆ. ಮಾರ್ಚ್ 1ರಿಂದ ಮಾರ್ಚ್ 7ರೊಳಗೆ ವಾಟರ್ ಟ್ಯಾಂಕರ್ ನೋಂದಣಿ ಕಡ್ಡಾಯ ಎಂದು ತಿಳಿಸಿದರು.

ಟ್ರೇಡ್ ಲೈಸೆನ್ಸ್ ಪಡೆದೇ ನೀರು ಸರಬರಾಜು ಮಾಡಬೇಕು. ನೋಂದಣಿ ಮಾಡಿಕೊಳ್ಳದ ಟ್ಯಾಂಕರ್ ವಶಕ್ಕೆ ಪಡೆಯುತ್ತೇವೆ. ಜೊತೆಗೆ ಟ್ರೇಡ್ ಅಸೋಸಿಯೇಷನ್ ಜೊತೆ ಮಾತನಾಡಿ ದರ ನಿಗದಿ ಮಾಡುತ್ತೇವೆ.. BWSSB ಅವರು ನೀರನ್ನು ಸರಬರಾಜು ಮಾಡಲಿದ್ದಾರೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.

Key words: Water tanker- registration-mandatory-March 7- BBMP