ಜುಲೈ 10ರಿಂದ ಕೆಆರ್ ಎಸ್ ನಿಂದ ನಾಲೆಗಳಿಗೆ ನೀರು ಬಿಡುಗಡೆ ಸಾಧ್ಯತೆ

ಮಂಡ್ಯ,ಜುಲೈ,9,2024 (www.justkannada.in): ಈ ಬಾರಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆ.ಆರ್.ಎಸ್ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು ಡ್ಯಾಂನ ನೀರಿನ ಮಟ್ಟ 100 ಅಡಿ ಗಡಿದಾಟಿದೆ.

ಈ ಮಧ್ಯೆ ಜುಲೈ 10ರಿಂದ ಕೆಆರ್ ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ.  ಜುಲೈ 8ರ ಸಂಜೆಯಿಂದಲೇ ನೀರು ಬಿಡುಗಡೆ ಮಾಡುವುದಾಗಿ ಜಿಲ್ಲಾಡಳಿತ ತಿಳಿಸಿತ್ತು. ಜುಲೈ 8ರಿಂದ 15 ದಿನಗಳ ಕಾಲ ನೀರು ಬಿಡುಗಡೆ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಆದರೆ ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೀರು ಬಿಡುಗಡೆ ವಿಳಂಬವಾಗಿದೆ. ಕಾಮಗಾರಿಯಿಂದಾಗಿ ನಾಲೆಯಲ್ಲಿ ನೀರು ಹರಿಯುವ ಸ್ಥಳಗಳಲ್ಲಿಯೇ ಯಂತ್ರೋಪಕರಣಗಳು ಇವೆ. ನಾಲೆಯಿಂದ ಯಂತ್ರೋಪಕರಣಗಳನ್ನು ತೆರವುಗೊಳಿಸಿ ಜುಲೈ 10ರಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ.

Key words: Water, release, KRS, canals, July 10