ಮೈಸೂರು,ಜನವರಿ,9,2021(www.justkannada.in): ಮೈಸೂರಿನ ನಿವೇದಿತಾ ನಗರ ಪಾರ್ಕ್ ನಲ್ಲಿ ಶುದ್ದೀಕರಿಸಿದ ನೀರಿನಿಂದ ಕಾರ್ಯನಿರ್ವಹಿಸುವ ಕಾರಂಜಿಯನ್ನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಲೋಕಾರ್ಪಣೆ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ರಿಮೋಟ್ ಬಟನ್ ಒತ್ತುವ ಮೂಲಕ ನೀರಿನ ಕಾರಂಜಿಯನ್ನ ಉದ್ಘಾಟಿಸಿದರು. ನೂತನ ಕಾರಂಜಿ ಇದೀಗ ನಿವೇದಿತಾ ಪಾರ್ಕ್ ಅಂದವನ್ನ ಮತ್ತಷ್ಟು ಹೆಚ್ಚಿಸಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಗೆ ಶಾಸಕರಾದ ಜಿ.ಟಿ.ದೇವೇಗೌಡ, ಎಲ್. ನಾಗೇಂದ್ರ ಸಾಥ್ ನೀಡಿದರು. 
ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ಹೆಚ್. ವಿ. ರಾಜೀವ್, ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ವಲಯ ಆಯುಕ್ತ ಸತ್ಯಮೂರ್ತಿ, ಅಧೀಕ್ಷಕ ಇಂಜಿನಿಯರ್ ರಂಗಯ್ಯ ಮತ್ತಿತರರ ಉಪಸ್ಥಿತರಿದ್ದರು.
Key words: Water- Fountain –mysore- Nivedita Park-minister- st somshekar






