ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವು: ನಾಲ್ವರ ರಕ್ಷಣೆ

ರಾಮನಗರ,ಮೇ,19,2025 (www.justkannada.in):  ಜಲಾಶಯದಲ್ಲಿ ಈಜಲು ಹೋಗಿದ್ದ ಮೂವರು ಮೂವರು ಯವತಿಯರು ಮುಳುಗಿ ಸಾವನ್ನಪ್ಪಿರುವ ಘಟನೆ  ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಸಂಭವಿಸಿದೆ.

ವೈಜಿಗುಡ್ಡ ಜಲಾಶಯದಲ್ಲಿ ಈ ಘಟನೆ ನಡೆದಿದೆ.  ಸಂಭವಿಸಿದೆ. ಬೆಂಗಳೂರು ಮೂಲದ ರಾಘವಿ (18) ಮಧುಮಿತ (20) ಹಾಗೂ ರಮ್ಯಾ (22) ಮೃತ ಯುವತಿಯರು . ಜಲಾಶಯ ವೀಕ್ಷಣೆಗೆ ಎಂದು 7 ಯುವತಿಯರು ವೈಜಿಗುಡ್ಡ ಜಲಾಶಯಕ್ಕೆ ತೆರಳಿದ್ದರು.   ಓರ್ವ ಯುವತಿ ನೀರಿಗೆ ಬಿದ್ದಿದ್ದ ವೇಳೆ ರಕ್ಷಣೆಗೆ ಉಳಿದ ಸ್ನೇಹಿತೆಯರು ಧಾವಿಸಿದ್ದಾರೆ. ಯುವತಿಯ ರಕ್ಷಣೆಗಾಗಿ 7 ಯುವತಿಯರು ನೀರಿಗೆ ಧುಮುಕಿದ್ದಾರೆ. ಕೂಡಲೇ ಸ್ಥಳೀಯ ಓರ್ವ ಯುವಕ ನಾಲ್ವರು ಯುವತಿಯರನ್ನು ರಕ್ಷಿಸಿದ್ದಾನೆ.

ಆದರೆ ಮೂವರು ಯುವತಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಯುವತಿಯರು  ಬೆಂಗಳೂರಿನಿಂದ ಸಂಬಂಧಿಕರ ಮನೆಗೆ ಬಂದಿದ್ದರು ಎನ್ನಲಾಗಿದೆ.  ಸದ್ಯ ಮೃತ ದೇಹಗಳನ್ನು ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Three young women, drown , reservoir, Death, four rescued