Monday, September 14, 2026

BDA Apartments

ರಾಜ್ಯದಲ್ಲಿ ವಕ್ಫ್ ಭೂತ ಕ್ಯಾನ್ಸರ್ ನಂತೆ ಹಬ್ಬುತ್ತಿದೆ – ಆರ್.ಅಶೋಕ್ BDA JK_Adv BDA Adv
Home Front Page ರಾಜ್ಯದಲ್ಲಿ ವಕ್ಫ್ ಭೂತ ಕ್ಯಾನ್ಸರ್ ನಂತೆ ಹಬ್ಬುತ್ತಿದೆ – ಆರ್.ಅಶೋಕ್

ರಾಜ್ಯದಲ್ಲಿ ವಕ್ಫ್ ಭೂತ ಕ್ಯಾನ್ಸರ್ ನಂತೆ ಹಬ್ಬುತ್ತಿದೆ – ಆರ್.ಅಶೋಕ್

ಚನ್ನಪಟ್ಟಣ,ನವೆಂಬರ್,7,2024 (www.justkannada.in):  ವಕ್ಫ್ ಭೂತ ರಾಜ್ಯದಲ್ಲಿ ಕ್ಯಾನ್ಸರ್ ರೀತಿಯಲ್ಲಿ ಹಬ್ಬುತ್ತಿದೆ. ಹಿಂದೂಗಳ ಭೂಮಿಯನ್ನು ವಕ್ಫ್ ಕಬಳಿಕೆ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಅವರು ಕಳವಳ ವ್ಯಕ್ತಪಡಿಸಿದರು.

ಕೋಡಂಬಹಳ್ಳಿ ಪಂಚಾಯಿತಿ ವ್ಯಾಪ್ತಿಯ ಹುಣಸನಹಳ್ಳಿ ಗ್ರಾಮದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಕರ್ನಾಟಕ ಭಾರತದಲ್ಲಿ ಇದೆಯಾ? ಅಥವಾ ಪಾಕಿಸ್ತಾನದಲ್ಲಿ ಇದೆಯಾ? ರಾಜ್ಯ ಕಾಂಗ್ರೆಸ್  ಸರ್ಕಾರ ಒಂದು ಸಮುದಾಯಕ್ಕೆ ಒಂದು ಕಾನೂನು, ಹಿಂದೂ ಸಮಾಜಕ್ಕೆ ಇನ್ನೊಂದು ಕಾನೂನು ಎಂದು ವರ್ತಿಸುತ್ತಿದೆ. ದೇವಾಲಯಗಳು, ಮಠಮಾನ್ಯಗಳ ಜಮೀನುಗಳು ವಕ್ಫ್ ಆಸ್ತಿ ಎಂದು ತೋರಿಸುವ ಕೆಲಸ ಮಾಡಲಾಗುತ್ತಿದೆ. ರೈತರ ಜಮೀನಿನ ಪಹಣಿಯಲ್ಲಿ ವಕ್ಫ್, ದರ್ಗಾ ಆಸ್ತಿ ಎಂದು ಬರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರಿಗೆ ದುರಾಸೆಗೆ ಮಿತಿ ಬೇಡವೇ? ಅವರಿಗೆ 14 ನಿವೇಶನ ಅವರಿಗೆ ಯಾತಕ್ಕೆ? ಎಲ್ಲಾ ಸೈಟುಗಳು ಅವರಿಗೆ ಬೇಕು. ಇದು ನಿಜಕ್ಕೂ ಬೇಸರದ ವಿಚಾರ. ದೇವೇಗೌಡರು, ಕುಮಾರಸ್ವಾಮಿ ಅವರು ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ರೈತರ ಜೀವಕ್ಕೆ ಜೀವ ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಮಳೆಗಾಳು ಪಾರ್ಟಿ. ಅದರ ಪಾಪದ ಕೊಡ ತುಂಬಿದೆ. ಅದು ಆರು ತಿಂಗಳು ಇರುತ್ತೋ ಇಲ್ಲವೋ ಗೊತ್ತಿಲ್ಲ ಎಂದರು ಅವರು.

ವಕ್ಫ್ ಕಾಯ್ದೆಗೆ ತಿದ್ದುಪಡಿ ತರಬೇಕು; ಯದುವೀರ್

ಮೈಸೂರು ಹಾಗೂ ಕೊಡಗು ಸಂಸದರಾದ  ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ; ವಕ್ಫ್ ವಿವಾದವನ್ನು ನಾವು ಸಂಘಟಿತವಾಗಿ ಎದುರಿಸಬೇಕಿದೆ. ಹಿಂದೂ ಸಮಾಜದ ಆಸ್ತಿ ಕಾಪಾಡಬೇಕು, ನಾವು ಎಚ್ಚರಿಕೆಯಿಂದ ಇರಬೇಕು. ಹಳೆಯ ಮೈಸೂರು ಭಾಗ ಶಾಂತಿಯುತ ಪ್ರದೇಶ. ಆದರೆ, ಈ ವಕ್ಫ್ ವಿವಾದದಿಂದ ಶಾಂತಿ ಕದಡುವ ಪ್ರಯತ್ನ ಮಾಡಲಾಗುತ್ತದೆ. ವಕ್ಫ್ ಬಗ್ಗೆ ನಾವು ಕಾನೂನಾತ್ಮಕವಾಗಿ ಹೋರಾಟ ಮಾಡಬೇಕು.

ವಕ್ಫ್  ಕಾಯ್ದೆಗೆ ತಿದ್ದುಪಡಿ ತರಬೇಕು. ಹಾಗೆ ಮಾಡುವ ಮೂಲಕ ಆ ಸಮುದಾಯಕ್ಕೂ ದೇಶದ ಕಾನೂನು ನಮಗೆ ಅನ್ವಯ ಆಗುವಂತೆ ಮಾಡಬೇಕು ಎಂದು ಅವರು ಒತ್ತಾಯ ಮಾಡಿದರು.

Key words: Waqf, s spreading, like, cancer, R. Ashok