ಪ್ರಜ್ಞೆಯೊಂದಿಗೆ ಇರಲಿ ಎಚ್ಚರ… ಕುಕ್ಕರಳ್ಳಿ ಕೆರೆಯಲ್ಲಿ ಎಲ್ಲೆಂದರಲ್ಲಿ ಬಿಸಾಡದಿರಿ ಬಳಸಿದ ಮಾಸ್ಕ್

ಮೈಸೂರು, ಜನವರಿ 17, 2021 (www.justkannada.in): ನಗರದ ಪ್ರಮುಖ ಪಕ್ಷಿ ತಾಣವಾದ ಕುಕ್ಕರಳ್ಳಿ ಕೆರೆಯಲ್ಲಿ ಬೇಕೆಂದರಲ್ಲಿ ಮಾಸ್ಕ್ ಬಿಸಾಡುವ ಕೆಲ ವಾಯುವಿಹಾರಿಗಳು ಕೊರೊನಾ ಆತಂಕವನ್ನೇ ಮರೆತಿದ್ದಾರೆ.

ಮಾಸ್ಕ್ ಬಗ್ಗೆ ಅಸಡ್ಡೆ ತೋರಿದ ಜನ ಬೇಕೆಂದ ಕಡೆ ಮಾಸ್ಕ್ ಬಿಸಾಡುತ್ತಿದ್ದಾರೆ. ಇದಕ್ಕೆ ಪಕ್ಷಿ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಬಿಸಾಡುವ ಮಾಸ್ಕ್ ನಿಂದ ಪಕ್ಷಿಗಳಿಗೆ ಪ್ರಾಣಹಾನಿ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯಕ್ಕೆ ಒಳಪಡುವ ಕುಕ್ಕರಳ್ಳಿ ಕೆರೆ ಹಲವು ಪ್ರಭೇದಗಳ ಪಕ್ಷಿಗಳಿಗೆ ತಾಣವಾಗಿದೆ. ಪ್ರತಿನಿತ್ಯ ಮುಂಜಾನೆ ಹಾಗೂ ಸಂಜೆ ವೇಳೆಯಲ್ಲಿ ವಾಯುವಿಹಾರಕ್ಕೆಂದು ಬರುವವರು ಕಂಡ ಕಂಡಲ್ಲಿ ಮಾಸ್ಕ್ ಬಿಸಾಡುತ್ತಿದ್ದಾರೆ.

ಈ ಹಿನ್ನೆಲೆ ಕಳವಳ ವ್ಯಕ್ತಪಡಿಸುತ್ತಿರುವ ಪಕ್ಷಿ ಪ್ರೇಮಿಗಳು. ಕಂಡ ಕಂಡಲ್ಲಿ ಮಾಸ್ಕ್ ಬಿಸಾಡುವವರ ಕೊಂಚ ಪ್ರಜ್ಞಾವಂತಿಕೆ ಬೆಳೆಸಿಕೊಂಡು ಎಲ್ಲೆಂದರಲ್ಲಿ ಮಾಸ್ಕ್ ಬಿಸಾಡದಂತೆ ಮನವಿ ಮಾಡಿದ್ದಾರೆ.

Pic: mysuru_memes